ಬುಧವಾರ, ನವೆಂಬರ್ 19, 2025

ನ.21 ರಿಂದ ಬಳ್ಳಾರಿ ನಗರ ಸಾರಿಗೆ ಬಸ್ ನಿಲ್ದಾಣದ(ಹಳೇ ಬಸ್ ನಿಲ್ದಾಣ) ಮೂಲಕ ಬಸ್ ಸಂಚಾರ ಪುನಾರಂಭ

ಬಳ್ಳಾರಿ,ನ.19(ಕರ್ನಾಟಕ ವಾರ್ತೆ): ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ರೈಲ್ವೆ ಕೆಳಸೇತುವೆ ರಸ್ತೆಯ ವರೆಗೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ಮುಕ್ತಾಯಗೊಂಡಿದ್ದು, ನ.21 ರಿಂದ ನಗರ ಸಾರಿಗೆ ಬಸ್ ನಿಲ್ದಾಣದ (ಹಳೇ ಬಸ್ ನಿಲ್ದಾಣ) ಮೂಲಕ ಬಸ್ ಗಳು ಸಂಚರಿಸಲಿವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಎಲ್ಲಾ ಗ್ರಾಮಾಂತರ ಹಾಗೂ ಹೊಸಪೇಟೆ, ಗಂಗಾವತಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಮತ್ತು ಸಂಡೂರು ಮಾರ್ಗದ ಬಸ್‌ಗಳು ಪುನಃ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ