ಬುಧವಾರ, ನವೆಂಬರ್ 26, 2025
ನ.28 ರಂದು ಟ್ರೇಡ್ಸ್, ಪರಿಸರ ನಿರ್ವಹಣೆ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರ
ಬಳ್ಳಾರಿ,ನ.26(ಕರ್ನಾಟಕ ವಾರ್ತೆ):
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಎಂಎಸ್‌ಎAಇ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸಿಸುವುದು (ಆರ್‌ಎಎಂಪಿ) ಯೋಜನೆಯಡಿ ನ.28 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ನಲ್ಲಚೆರವು ಪ್ರದೇಶದ ಕೌಲ್ ಬಜಾರ್ ಜಿಲ್ಲಾ ಕ್ರೀಡಾಂಗಣ ರಸ್ತೆಯ ರೈಲ್ವೆ 1ನೇ ಗೇಟ್‌ನ ಮೊಹಮ್ಮದಿಯ ಕಾಲೇಜ್ ಹತ್ತಿರ ಗಾರ್ಮೆಂಟ್ ರಿಸರ್ಚ್ ಟ್ರೆöÊನಿಂಗ್ ಡಿಸೈನ್ ಎಂಡ್ ಡೆವಲಪ್ಮೆಂಟ್ ಸೆಂಟ್ (ಜಿಆರ್‌ಟಿಡಿಎಸ್) ನಲ್ಲಿ ಟ್ರೇಡ್ಸ್ ಹಾಗೂ ಪರಿಸರ ನಿರ್ವಹಣೆ (ಇಎಸ್‌ಎಂ) ಬಗ್ಗೆ ಒಂದು ದಿನದ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರÀದಲ್ಲಿ ಉದ್ಯಮಿದಾರರಿಗೆ ಟ್ರೇಡ್ಸ್ ಕುರಿತು ಅರಿವು ಮೂಡಿಸುವ ಬಗ್ಗೆ ಮತ್ತು ಪರಿಸರ ನಿರ್ವಹಣೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಆಸಕ್ತಿಯುಳ್ಳ ಉದ್ದಿಮೆದಾರರು ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ