ಸೋಮವಾರ, ನವೆಂಬರ್ 24, 2025

ಬಾಲಕ ಕಾಣೆ: ಪತ್ತೆಗೆ ಮನವಿಬಾಲಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ನ.24(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ಕುರೇಕುಪ್ಪ ಗ್ರಾಮದ ಮಲ್ಲಿಕಾರ್ಜುನ ಎನ್ನುವ 13 ವರ್ಷದ ಬಾಲಕ ಬಳ್ಳಾರಿ ತಾಲ್ಲೂಕಿನ ಚೇಳ್ಳಗುರ್ಕಿಯ ಗಾಂಧಿತತ್ವ ಆಧಾರಿತ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನ.13 ರಂದು ಚೆಳ್ಳಗುರ್ಕಿಯಿಂದ ಬಳ್ಳಾರಿಗೆ ಹೋಗುತ್ತೇನೆ ಎಂದು ಕಾಣೆಯಾಗಿದ್ದು, ಈ ಕುರಿತು ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. ಕಾಣೆಯಾದ ಬಾಲಕನ ಚಹರೆ: ಎತ್ತರ 05 ಅಡಿ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಮತ್ತು ಬಿಳಿ ಬಣ್ಣಗಳ ಮಿಶ್ರಿತ ಉದ್ದ ಗೆರೆವುಳ್ಳ ಪುಲ್ ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿ.ಡಿ ಹಳ್ಳಿ ಪೋಲಿಸ್ ಠಾಣೆಯ ದೂ.08392-295010, ಪಿಎಸ್‌ಐ ಮೊ.9480803052, ಪಿಐ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಎಸ್‌ಪಿ ಕಚೇರಿ ದೂ.08392-258400, ಸಿರುಗುಪ್ಪ ಡಿಎಸ್‌ಪಿ ಕಚೇರಿ ದೂ.08392-27600 ಅಥವಾ ಪಿ.ಡಿ ಹಳ್ಳಿ ವೃತ್ತದ ಸಿಪಿಐ ದೂ.08392-276461 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ