ಬುಧವಾರ, ನವೆಂಬರ್ 19, 2025
ಅನಾಮಧೇಯ ಮೃತ ಯುವಕನ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ನ.19(ಕರ್ನಾಟಕ ವಾರ್ತೆ):
ನಗರದ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್.ಆರ್ ಗವಿಯಪ್ಪ ವೃತ್ತದ ಬುಡಾ ಕಾಂಪ್ಲೆಕ್ಸ್ನಲ್ಲಿರುವ ಅನ್ನಪೂರ್ಣೇಶ್ವರಿ ಖಾನಾವಳಿ ಹತ್ತಿರ ಸುಮಾರು 25 ರಿಂದ 30 ವರ್ಷದ ಅನಾಮಧೇಯ ಯುವಕನನ್ನು ನ.17 ಯಾವುದೋ ದುರುದ್ದೇಶದಿಂದ ಕೊಲೆ ಮಾಡಿದ್ದು, ಮೃತ ಯುವಕನ ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಅಂದಾಜು 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ.
ಮೃತನ ಮೈಮೇಲಿನ ಬಟ್ಟೆಗಳು: ನೀಲಿ ಬಣ್ಣದ ಬಿಳಿ ಬಣ್ಣದ ಗೆರೆಗಳುಳ್ಳ ಅರ್ಧ ತೋಳಿನ ಟೀ-ಶರ್ಟ್, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಹಸಿರು ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಬಲಗೈ ಮೇಲೆ ಅಮ್ಮ ಎಂದು ಇಂಗ್ಲೀಷ್‌ನಲ್ಲಿ ಮತ್ತು ಅದರ ಮೇಲೆ ಶಿವನ ಡಮರುಗದ ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಕಾಲಿಗೆ ಬೆಲ್ಟ್ ಚಪ್ಪಲಿ ಹಾಕಿದ್ದು, ಮೃತನ ಬಲಗಾಲಿನ ಹೆಬ್ಬೆರಳು ಇರುವುದಿಲ್ಲ.
ಅನಾಮಧೇಯ ಮೃತ ಯುವಕನ ಮಾಹಿತಿ ಸಿಕ್ಕಲ್ಲಿ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ದೂ.08392-250033, ಮೊ.9480803096 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ