ಸೋಮವಾರ, ನವೆಂಬರ್ 17, 2025
ಮಹಿಳೆ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ನ.17(ಕರ್ನಾಟಕ ವಾರ್ತೆ):
ತಾಲ್ಲೂಕಿನ ವಣೇನೂರು ಗ್ರಾಮದ 33 ವರ್ಷದ ಹೆಚ್.ಎಂ ಜಯಶ್ರೀ ಎನ್ನುವ ಮಹಿಳೆಯು ಅ.29 ರಂದು ಕಾಣೆಯಾಗಿರುವ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ: ಎತ್ತರ 4 ಅಡಿ, ಗೋಧಿಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಟಾಪ್, ಕೆಂಪು ಬಣ್ಣದ ನೈಟಿ, ಬಿಳಿ ಮತ್ತು ಕೆಂಪು ವೇಲು ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್.ಪಿ ಕಚೇರಿ ದೂ:08392258100, ಸಿರುಗುಪ್ಪ ಉಪ ವಿಭಾಗದ ಡಿ.ಎಸ್.ಪಿ ಮೊ.9480803021, ಪಿ.ಡಿ ಹಳ್ಳಿ ವೃತ್ತದ ಸಿ.ಪಿ.ಐ ಮೊ.9480803031 ಅಥವಾ ಮೋಕಾ ಪೊಲೀಸ್ ಠಾಣೆಯ ಪಿ.ಎಸ್.ಐ ದೂ:08392293228, ಮೊ:9480803050 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ