ಬುಧವಾರ, ನವೆಂಬರ್ 26, 2025

ವಿಶ್ವ ವಿಕಲಚೇತನರ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನ್ಯಾ.ರಾಜೇಶ್ ಎನ್.ಹೊಸಮನೆ ಹೇಳಿಕೆ | ವಿಶೇಷಚೇತನರಿಗೆ ಪ್ರೋತ್ಸಾಹ ನೀಡೋಣ

ಬಳ್ಳಾರಿ,ನ.26(ಕರ್ನಾಟಕ ವಾರ್ತೆ): ವಿಶೇಷಚೇತನರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷವಾದಂತಹ ಆಸಕ್ತಿ ನೀಡಿ ಅವರಲ್ಲಿ ಅಡಗಿರುವ ಸಾಮರ್ಥ್ಯವನ್ನು ಸಮಾಜ ಮುಖ್ಯವಾಹಿನಿಗೆ ತರುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮೆ¯್ಲರ ಜವಾಬ್ದಾರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವÀ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿಎಂಸಿಆರ್‌ಸಿ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ ವಿಕಲಚೇತನರಿಗೆ ವಿಕಲಚೇತನರ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷಚೇತನ ಮಕ್ಕಳು ವಿಶೇಷ ಸಾಮರ್ಥ್ಯ ಹೊಂದಿರುತ್ತಾರೆ. ವಿಶೇಷಚೇತನರ ಸಾಧನೆಗಳನ್ನು ನೋಡಿದರೆ ಎಂಥವರಿಗೂ ಸಹ ಉತ್ಸಾಹ ಬರುತ್ತದೆ. ಯಾವುದೇ ಕೀಳರಿಮೆ ಹೊಂದದೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗಿದೆ. ವಿಕಲಚೇತನರು ಅಸಮರ್ಥರಲ್ಲ ಸಮರ್ಥರು ಎಂದು ರಾಷ್ಟಿçÃಯ, ಅಂತರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟçಕ್ಕೆ ಗೌರವ ತಂದಿದ್ದಾರೆ ಎಂದರು. ಟ್ರಾಮಾಕೇರ್ ವೈದ್ಯಕೀಯ ಆಸ್ಪತ್ರೆ ಅಧೀಕ್ಷಕ ಶಿವನಾಯಕ್ ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರಿಗೆ ವೈದ್ಯಕೀಯ ಸಂಸ್ಥೆಯಲ್ಲಿ ಯಾವುದೇ ಸೌಲಭ್ಯ ಬೇಕಾದರೂ ಒದಗಿಸಿಕೊಡಲಾಗುವುದು ಎಂದು ಹೇಳಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ವಿಕಲಚೇತನರು ಪ್ರಶಸ್ತಿಯನ್ನು ಪಡೆಯುವುದು ಮುಖ್ಯವಲ್ಲ, ಭಾಗವಹಿಸಿದ ವಿಕಲಚೇತನರೇ ಚಾಂಪಿಯನ್ನರು ಎಂದು ಕರೆಕೊಟ್ಟರು. ಕಾರ್ತಿಕ್ ಅವರು ಮಾತನಾಡಿ, ವಿಶೇಷ ಚೇತನರಿಗೆ ಕುರುಡ, ಕುಂಟ, ಮೂಕ, ಕಿವುಡ, ಬುದ್ದಿಮಾಂದ್ಯ ಎಂದು ಹೇಳುವುದರ ಮೂಲಕ ಅವರನ್ನು ಅವಮಾನಿಸಬಾರದು. ಅವರಲ್ಲಿ ವಿಶೇಷ ಸಾಮರ್ಥ್ಯವಿದೆ, ಅವರಿಗೆ ದೃಷ್ಠಿದೋಷವುಳ್ಳವರು, ದೈಹಿಕವಿಕಲಚೇತನರು, ಶ್ರವಣ ದೋಷವುಳ್ಳವರು, ಮಾನಸಿಕ ವಿಶೇಷಚೇತನರು ಎಂದು ಕರೆಯುವುದರ ಮೂಲಕ ಅವರಿಗೆ ಗೌರವ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಿನಿ,ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಚಿನ್ನಪಾಲಯ್ಯ, ಚೆಂಗಾರೆಡ್ಡಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಮುಖ್ಯಗುರುಗಳಾದ ಚಂದ್ರಶೇಖರ್, ತಮ್ಮನ್ನ ಶಾಲೆಯ ಮುಖ್ಯಸ್ಥರಾದ ಸವಿತ, ಅನುಗ್ರಹ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಪ್ರಜ್ಞಾ, ಡಾ.ಭೀಮಾ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥ ಮಹೇಶ್ ಕುಮಾರ್ ಹೆಚ್.ಎಂ., ಶ್ರೀ ದೊಡ್ಡ ಬಸವೇಶ್ವರ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಮುಖ್ಯಸ್ಥ ಫಣಿರಾಜ್, ನವಜೀವನ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಎಸ್ಥರ್, ಸರ್ಕಾರಿ ಕಿವುಡು ಮಕ್ಕಳ ಪಾಠಶಾಲೆಯ ಮುಖ್ಯ ಶಿಕ್ಷಕ ರವಿ ಸಿ.ಕೆ., ನವತಾರೆ ಅಂಗವಿಕರ ಒಕ್ಕೂಟದ ಅಧಕ್ಷ ಸಾದಿಕ್, ಅಂಗವಿಕಲರ ಪಾಲಕರ ಒಕ್ಕೂಟದ ಮುಖ್ಯಸ್ಥ ಕುಮಾರಪ್ಪ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಮುಖ್ಯಸ್ಥರಾದ ನಾಗೇಂದ್ರ ಮತ್ತು ನಾರಾಯಣ ನಾಯಕ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿ ವರ್ಗ, ಬಳ್ಳಾರಿ ಜಿಲ್ಲೆಯ ಎಂ.ಆರ್.ಡಬ್ಲೂö್ಯ ಯು,ಆರ್.ಡಬ್ಲೂö್ಯ ವಿ.ಆರ್.ಡಬ್ಲೂö್ಯ ಕಾರ್ಯಕರ್ತರು ಉಪಸ್ಥಿತರಿದ್ದರು. ವಿವಿಧ ಅಂಗವಿಕಲತೆಯ ಸುಮಾರು 1000 ಜನ ವಿಶೇಷಚೇತನರು ಭಾಗವಹಿಸಿ ಕ್ರಿಕೇಟ್, ಗುಂಡು ಎಸೆತ, ರನ್ನಿಂಗ್ ರೇಸ್, ಬೈಕ್ ರೇಸ್, ಕೇನ್ ರೇಸ್, ಜಾವಲಿನ್ ಥ್ರೋ, ಮ್ಯೂಜಿಕಲ್ ಚೇರ್, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಗೀತೆ, ಭಾವಗೀತೆ, ಫ್ಯಾನ್ಸಿ ಡ್ರೆಸ್, ಚಿತ್ರಕಲೆ ಮುಂತಾದ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ ಸ್ವಾಗತಿಸಿದರು. ವಿಶ್ವ ಭಾರತಿ ಕಲಾ ನಿಕೇತನ ಮತ್ತು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಗುರುಮೂರ್ತಿ ಕೆ.ಹೆಚ್ ಕಾರ್ಯಕ್ರಮ ನಿರೂಪಿಸಿದರು. ಸ್ಮೆöÊಲ್ ಸಂಸ್ಥೆಯ ಮುಖ್ಯಸ್ಥ ಫಣಿರಾಜ್ ವಂದಿಸಿದರು. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ