ಬುಧವಾರ, ನವೆಂಬರ್ 26, 2025

ಬಳ್ಳಾರಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಸದಸ್ಯರ ನೇಮಕ: ಅರ್ಜಿ ಆಹ್ವಾನ

ಬಳ್ಳಾರಿ,ನ.26(ಕರ್ನಾಟಕ ವಾರ್ತೆ): ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನಿವೃತ್ತ ನಾಗರೀಕ ಸೇವಾ ಅಧಿಕಾರಿ ಒಬ್ಬರನ್ನು ಸದಸ್ಯರಾಗಿ ಹಾಗೂ ನಾಗರೀಕ ಸಮಾಜದ ಒಬ್ಬರನ್ನು ಸದಸ್ಯರಾಗಿ ಕಾರ್ಯ ನಿರ್ವಹಿಸಲು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಸ್ವ-ವಿವರ ಹಾಗೂ ಇತ್ತೀಚಿನ ವಿಳಾಸದ ಮಾಹಿತಿಯೊಂದಿಗೆ ಅರ್ಜಿಯ ಜೊತೆಗೆ ಪೂರಕ ದಾಖಲೆಗಳೊಂದಿಗೆ ಡಿಸೆಂಬರ್ 11 ರೊಳಗಾಗಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಲ್ಲಿಸಬೇಕು. ಹುದ್ದೆಗಳ ವಿವರ(ಸದಸ್ಯರು): ನಿವೃತ್ತ ನಾಗರೀಕ ಸೇವಾ ಅಧಿಕಾರಿ (ಸಹಾಯಕ ಆಯುಕ್ತರ ಶ್ರೇಣಿಗಿಂದ ಕಡಿಮೆಯಿಲ್ಲದ), ನಾಗರೀಕ ಸಮಾಜದ ಒಬ್ಬ ವ್ಯಕ್ತಿ. ಹೆಚ್ಚಿನ ಮಾಹಿತಿಗಾಗಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ ವಿ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ