ಬುಧವಾರ, ನವೆಂಬರ್ 5, 2025

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ನ.05(ಕರ್ನಾಟಕ ವಾರ್ತೆ): ಕುಡತಿನಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಡತಿನಿ ಕೆಪಿಸಿಎಲ್ ಗೇಟ್ ಹತ್ತಿರ ಹೊಸಪೇಟೆ-ಬಳ್ಳಾರಿ ರಾಷ್ಟಿçÃಯ ಹೆದ್ದಾರಿ-67 ರಸ್ತೆಯಲ್ಲಿ ಅಂದಾಜು 35-40 ವರ್ಷದ ಅನಾಮಧೇಯ ವ್ಯಕ್ತಿಯು ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಮೋಟರ್ ಸೈಕಲ್ ವಾಹನ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ವ್ಯಕ್ತಿಗೆ ಡಿಕ್ಕಿ ಹೊಡೆದು ಜೀವ ಹಾನಿಗೊಳಿಸಿದ್ದು, ಬಿಎಂಸಿಆರ್‌ಸಿ ಅಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನ.04 ರಂದು ಮೃತಪಟ್ಟಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಉಪ ನೀರಿಕ್ಷಕರು ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ ಅಂದಾಜು 5.8 ಅಡಿ, ಕೋಲು ಮುಖ, ಸಾಧಾರಣ ಮೈ ಕಟ್ಟು, ಕಪ್ಪು ಮೈ ಬಣ್ಣ, ಹೊಂದಿರುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಡುತಿನಿ ಪೊಲೀಸ್ ಠಾಣೆಯ ದೂ.08392-248100, ಪಿಎಸ್‌ಐ ಮೊ.9480803078, ಕುರುಗೋಡು ಸಿ.ಪಿ.ಐ ಮೊ.9480803039 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ