ಸೋಮವಾರ, ಡಿಸೆಂಬರ್ 1, 2025

ಡಿ.03 ರಂದು ರಫ್ತು ಉತ್ತೇಜನ ಕುರಿತು ಒಂದು ದಿನದ ಕಾರ್ಯಾಗಾರ

ಬಳ್ಳಾರಿ,ಡಿ.01(ಕರ್ನಾಟಕ ವಾರ್ತೆ): ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ಉದ್ಯಮಶೀಲತಾ ಚಟುವಟಿಕೆಗಳನ್ನು ಬೆಂಬಲಿಸಲು, ಪೋಷಿಸಲು ಹಾಗೂ ಸ್ಥಳೀಯ ಮಟ್ಟದ ಎಂಎಸ್‌ಎAಇ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ರಫ್ತು ಉತ್ತೇಜನ ಕುರಿತು ಡಿ.03 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಒಂದು ದಿನದ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರÀದಲ್ಲಿ ವಿದ್ಯಾರ್ಥಿಗಳಿಗೆ, ಉದ್ಯಮಿದಾರರಿಗೆ ವ್ಯಾಪಾರ ಅವಕಾಶಗಳ ಕುರಿತು ಮಾರ್ಗದರ್ಶನ ವ್ಯವಹಾರ ಹಾಗೂ ರಫ್ತು ಪ್ರಚಾರÀ, ತಂತ್ರಜ್ಞಾನದ ಉನ್ನತೀಕರಣ, ಗುಣಮಟ್ಟದ ಪ್ರಮಾಣೀಕರಣಕ್ಕೆ ಬೆಂಬಲ, ಬ್ರಾಂಡಿAಗ್ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ