ಸೋಮವಾರ, ಡಿಸೆಂಬರ್ 1, 2025
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಡಿ.01(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣಗಳ ಮಧ್ಯ ರೈಲ್ವೇ ಕೆ.ಎಂ.ನA 69/7-8 ರಲ್ಲಿ ನ.30 ರಂದು ಸುಮಾರು 60 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಚಲಿಸುವ ರೈಲುಗಾಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಮೃತನ ವಾರಸುದಾರರ ಮಾಹಿತಿ ತಿಳಿದಿರುವುದಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ತನಿಖಾಧಿಕಾರಿ ಮನವಿ ಮಾಡಿದ್ದಾರೆ.
ಮೃತನ ಚಹರೆ ಗುರುತು: ಸರಿ ಸುಮಾರು ಎತ್ತರ 5.4 ಅಡಿ ಕೋಲು ಮುಖ, ಸಾಧಾರಣ ಮೈ ಕಟ್ಟು, ಸಾಧಾರಣ ಗೋಧಿ ಮೈ ಬಣ್ಣ, ಉದ್ದ ಮೂಗು, ಸಣ್ಣ ಹಣೆ, ತಲೆಯಲ್ಲಿ ಸುಮಾರು 01 ಇಂಚು ಬಿಳಿಯ ಕೂದಲು ಮತ್ತು ಬಿಳಿಯ ಗಡ್ಡ, ಮೀಸೆ ಹೊಂದಿರುತ್ತಾನೆ.
ಮೃತನ ಮೈ ಮೇಲಿನ ಬಟ್ಟೆ:
ಗುಲಾಬಿ ಬಣ್ಣದ ಶರ್ಟ್ (ಕಾಲರ್ ಹಿಂದುಗಡೆ Iಓಓಔಗಿಂ(38) ಂಟiಥಿou ಆesiಡಿe ಎಂದು ಇದೆ. ಬಿಳಿ ಬಣ್ಣದ ಬನಿಯನ್, ನೀಲಿ ಬಣ್ಣದ ಮತ್ತು ಬಿಳಿ ಪಟ್ಟಿಯುಳ್ಳ ಚೆಕ್ಸ್ ಲುಂಗಿ ಇರುತ್ತದೆ. ನೀಲಿ ಬಣ್ಣದ ಒಳುಡುಪು (ಐಇಘಿ ಅಔಒPಇಓಙ), ಕೆಂಪು ಬಣ್ಣದ ಉಡದಾರ, ಬಿಳಿಯ ಬಣ್ಣದ ಟವೆಲ್, ಕಪ್ಪು ಬಣ್ಣದ ಚಪ್ಪಲಿ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ದೂ.08392-276063, ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ.080-22871291 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
-----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ