ಬುಧವಾರ, ಡಿಸೆಂಬರ್ 10, 2025
ಜಲಧರೆಗಳ ನಕಾಶಿಕೆ, ಅಂತರ್ಜಲ ಸಂಬAಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ
ಬಳ್ಳಾರಿ,ಡಿ.10(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಅಂತರ್ಜಲ ಮಂಡಳಿ, ನೈರುತ್ಯ ಕ್ಷೇತ್ರ, ಬೆಂಗಳೂರು ಹಾಗೂ ಸಿವಿಲ್ ಎಂಜಿನಿಯರಿAಗ್ ವಿಭಾಗ, ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ) ಇವರ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ “ಜಲಧರೆಗಳ ನಕಾಶಿಕೆ, ಅಂತರ್ಜಲ ಸಂಬAಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ” ಎಂಬ ವಿಷಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ, ಅವರು ಕಾರ್ಯಾಗಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯ–ಕೇಂದ್ರ ಅಂತರ್ಜಲ ಇಲಾಖೆಗಳ ಅಧಿಕಾರಿಗಳು, ಶೈಕ್ಷಣಿಕ ವಲಯ, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಅಂತರ್ಜಲ ವಿಜ್ಞಾನದಲ್ಲಿ ನಡೆಯುತ್ತಿರುವ ತಾಂತ್ರಿಕ ಅಭಿವೃದ್ಧಿಗಳು ಹಾಗೂ ಸವಾಲುಗಳ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ) ಯ ಪ್ರಾಂಶುಪಾಲರಾದ ಡಾ.ಯಡವಳ್ಳಿ ಬಸವರಾಜ್ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.
‘ಕರ್ನಾಟಕದಲ್ಲಿನ ಕೇಂದ್ರೀಯ ಅಂತರ್ಜಲ ಮಂಡಳಿಯ ಚಟುವಟಿಕೆಗಳು’ ಕುರಿತು ಜಿ. ಕೃಷ್ಣಮೂರ್ತಿ, ‘ಬಳ್ಳಾರಿ ಜಿಲ್ಲೆಯ ಎನ್‌ಎಕ್ಯೂಐಎಂ ಅಧ್ಯಯನಗಳು’ ಕುರಿತು ಸಹಾಯಕ ಜಲವಿಜ್ಞಾನಿ ಡಾ.ದಮೇರ ಆಂಜನೇಯುಲು, ‘ಕರ್ನಾಟಕ ರಾಜ್ಯದಲ್ಲಿನ ನೀರಿನ ಮಟ್ಟ ಮತ್ತು ನೀರಿನ ಗುಣಮಟ್ಟದ ಮೇಲೆ ಹವಾಮಾನ ವ್ಯತ್ಯಾಸ ಮತ್ತು ಅದರ ಪ್ರಭಾವ’ ಕುರಿತು ಡಾ.ಎಂ. ಗೋಬಿನಾಥ್ ಮತ್ತು ‘ಸುಸ್ಥಿರ ಅಂತರ್ಜಲಕ್ಕಾಗಿ ಗ್ರಾಮ ಮಟ್ಟದಲ್ಲಿ ಅಂತರ್ಜಲ ಮೂಲಗಳ ಮೌಲ್ಯಮಾಪನ ನಿರ್ವಹಣೆ’ ಕುರಿತು ಡಾ.ಜೆ.ದವಿತುರಾಜ್ ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ) ಯ ಉಪ ಪ್ರಾಂಶುಪಾಲ ಮತ್ತು ಡೀನ್ ಡಾ.ಬಿ.ಎಸ್. ಖೇಣೆಡ್, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂವಿಜ್ಞಾನಿ ವಿ.ಬಸಂತ್, ವಿಜ್ಞಾನಿ–ಡಿ ಡಾ. ಜೆ. ದವಿತುರಾಜ್, ವಿಜ್ಞಾನಿ–ಸಿ ಡಾ.ಎಂ. ಗೋಬಿನಾಥ್, ಸಹ ಪ್ರಾಧ್ಯಾಪಕ ಡಾ.ಮೊಹಮ್ಮದ್ ಖಾಲಿದ್.ಎಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಅಂತರ್ಜಲ ವಿಜ್ಞಾನ ಮತ್ತು ನಿರ್ವಹಣೆಯ ವಿವಿಧ ಅಂಶಗಳಿಗೆ ಸಂಬAಧಿಸಿದAತೆ ತಾಂತ್ರಿಕ ತರಬೇತಿಗಳ ಉಪನ್ಯಾಸ ಕಾರ್ಯಕ್ರಮ ಜರುಗಿದವು. ನಂತರ ಪ್ರಶಿಕ್ಷಣಾರ್ಥಿಗಳ ಪ್ರತಿಕ್ರಿಯೆ ಹಾಗೂ ಸಂವಾದ ನಡೆಯಿತು.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ