ಗುರುವಾರ, ಜನವರಿ 1, 2026

ಶೇ.20 ರಿಯಾಯಿತಿ ದರದಲ್ಲಿ ಲಿಡ್ಕರ್ ವಸ್ತುಗಳು ಮಾರಾಟ

ಬಳ್ಳಾರಿ,ಜ.01(ಕರ್ನಾಟಕ ವಾರ್ತೆ): ಹೊಸ ವರ್ಷ ಹಾಗೂ ಮಕರ ಸಂಕ್ರಾAತಿ ಹಬ್ಬದ ಪ್ರಯುಕ್ತ ಜ.01 ರಿಂದ 18 ರವರೆಗೆ ಲಿಡ್ಕರ್ ನ ಎಲ್ಲಾ ಚರ್ಮವಸ್ತುಗಳನ್ನು ಶೇ.20 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಲಿಡ್ಕರ್ ನ ಜಿಲ್ಲಾ ಸಂಯೋಜಕ ಟಿ.ಸಂಜೀವಪ್ಪ ಅವರು ತಿಳಿಸಿದ್ದಾರೆ. ಗ್ರಾಹಕರು ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯ ಬುಡಾ ಕಾಂಪ್ಲೆಕ್ಸ್ ನ ಶಾಪ್ ನಂ.24 ಲಿಡ್‌ಕರ್ ಲೆದರ್ ಎಂಪೋರಿಯಮ್ ಇಲ್ಲಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ.08392271741, ಮೊ.9844667691 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ