ಸೋಮವಾರ, ಜನವರಿ 12, 2026
ಯುವತಿ ನಾಪತ್ತೆ; ಪತ್ತೆಗೆ ಮನವಿ
ಬಳ್ಳಾರಿ,ಜ.12(ಕರ್ನಾಟಕ ವಾರ್ತೆ):
ತಾಲ್ಲೂಕಿನ ಕುಂಟನಾಳ್ ಗ್ರಾಮದ ಬಾರೆಕಟ್ಟೆ ಓಣಿಯ ನಿವಾಸಿ ಎಸ್.ರೋಜಮ್ಮ ಎನ್ನುವ 21 ವರ್ಷದ ಯುವತಿ ತನ್ನ ಗಂಡನ ಊರಾದ ಎತ್ತಿನ ಬೂದಿಹಾಳ್ ಗ್ರಾಮದಿಂದ ತನ್ನ ತವರೂರಲ್ಲಿ ನಡೆಯುವ ಜಾತ್ರೆಗೆ ಬಂದಿದ್ದು, ಜ.03 ರಂದು ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರಳಿ ಬಾರದೇ ಕಾಣೆಯಾಗಿದ್ದು, ಈ ಕುರಿತು ಪಿ.ಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು:
ಅಂದಾಜು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಸೀರೆ, ಕುಪ್ಪಸ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392258100 ಅಥವಾ 100, ಬಳ್ಳಾರಿ ಗ್ರಾಮಾಂತರ ಡಿ.ಎಸ್.ಪಿ ಕಚೇರಿ ದೂ.08392-276000, ಪಿ.ಡಿ ಹಳ್ಳಿ ವೃತ್ತ ಸಿಪಿಐ ದೂ.08392-276461, ಪಿ.ಡಿ ಹಳ್ಳಿ ಪೊಲೀಸ್ ಠಾಣೆಯ ದೂ.08392-265010 ಮತ್ತು ಪಿ.ಎಸ್.ಐ ಮೊ.9480803052 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ