ಶುಕ್ರವಾರ, ಜನವರಿ 2, 2026

ಅನಾಮಧೇಯ ಮಹಿಳೆ ಮೃತ ದೇಹ: ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜ.02(ಕರ್ನಾಟಕ ವಾರ್ತೆ): ನಗರದ ಸತ್ಯಂ ಕಾಲೇಜಿನ ಮುಂಭಾಗದಲ್ಲಿ ಹೆಚ್‌ಎಲ್‌ಸಿ ಉಪ ಕಾಲುವೆಯಲ್ಲಿ ಸುಮಾರು 60 ರಿಂದ 65 ವರ್ಷದ ಅನಾಮಧೇಯ ಮೃತ ಮಹಿಳೆಯ ಶವವು ಜ.02 ರಂದು ತೇಲಿಕೊಂಡು ಬಂದಿದ್ದು, ಮೃತಳ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ವಾರಸುದಾರರ ಪತ್ತೆಗೆ ಸಹರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 5.4 ಅಡಿ, ಕೆಂಪು ಮೈಬಣ್ಣ, ದುಂಡು ಮುಖ, ಹಸಿರು ಬಣ್ಣದ ಸೀರೆ ಮತ್ತು ಕಪ್ಪು ಬಣ್ಣದ ಕುಪ್ಪಸ, ಎರಡು ಕೈಗಳಿಗೆ ಹಸಿರು ಬಳೆ ಧರಿಸಿರುತ್ತಾಳೆ. ತಲೆ ಕೂದಲು ಉದುರಿರುತ್ತದೆ. ಕೈ ಮತ್ತು ಕಾಲುಗಳನ್ನು ಜಲಚರ ಪ್ರಾಣಿಗಳು ಕಿತ್ತು ತಿಂದAತೆ ಇರುತ್ತದೆ. ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392258100 ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ದೂ.08392-276461 ಹಾಗೂ ಮೊ.9480803049 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ