ಬುಧವಾರ, ಜನವರಿ 14, 2026
ಅನಾಮಧೇಯ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜ.14(ಕರ್ನಾಟಕ ವಾರ್ತೆ):
ಕುಡುತಿನಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದಲ್ಲಿ ಸುಮಾರು 40 ವರ್ಷದ ಅನಾಮಧೇಯ ಅಸ್ವಸ್ಥ ಮಹಿಳೆಯು ಜ.08 ರಂದು ಕಂಡುಬAದಿದ್ದು, ಬಿಎಂಸಿ ಆರ್‌ಸಿ ಯಲ್ಲಿ ಚಿಕಿತ್ಸೆ ದೊರಕಿಸಿ, ನಗರದ ಕಂಟೋನ್ ಮೆಂಟ್ ಪ್ರದೇಶದ ಸ್ತಿçà ಸೇವಾ ನಿಕೇತನದಲ್ಲಿ ಜ.10 ರಂದು ದಾಖಲಿಸಲಾಗಿತ್ತು.
ಪುನಃ ಅನಾಮಧೇಯ ಮಹಿಳೆಯು ಹೊಟ್ಟೆ ನೋವು ಮತ್ತು ಉಸಿರಾಟ ತೊಂದರೆಯಿAದಾಗಿ ಅಸ್ವಸ್ಥಳಾಗಿದ್ದು, ನಂತರ ಬಿಎಂಸಿ ಆರ್‌ಸಿ ಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ. ಮೃತಳ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
ಚಹರೆ:
ಎತ್ತರ ಅಂದಾಜು 4.9 ಅಡಿ, ಸಾಧಾರಣ ಮೈಕಟ್ಟು, ಸಾಧಾರಣ ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿರುತ್ತಾಳೆ.
ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಕುಡುತಿನಿ ಪೊಲೀಸ್ ಠಾಣೆಯ ದೂ.08392-248100, ಪಿ.ಎಸ್.ಐ ಮೊ.9480803078, ಕುರುಗೋಡು ಸಿ.ಪಿ.ಐ ಮೊ.9480803039, ಬಳ್ಳಾರಿ ಕಂಟ್ರೋಲ್ ರೂಂ ದೂ.08392-279100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ