ಬುಧವಾರ, ಜನವರಿ 14, 2026
ವೃದ್ಧೆ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜ.14(ಕರ್ನಾಟಕ ವಾರ್ತೆ):
ನಗರದ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಿರಿಜಮ್ಮ ಎನ್ನುವ 78 ವರ್ಷದ ವೃದ್ಧೆ 2025ರ ಡಿ.29 ರಂದು ಮನೆಯಿಂದ ಹೇರ್ ಡ್ರೆöÊ ತರುತ್ತೇನೆ ಎಂದು ಅಂಗಡಿಗೆ ಹೋಗಿದ್ದು, ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ:
ಎತ್ತರ ಸುಮಾರು 4.5 ಅಡಿ, ದಪ್ಪನೆಯ ಮೈಕಟ್ಟು ಗೋಧಿ ಮೈಬಣ್ಣ, ದುಂಡನೆಯ ಮುಖ, ಬಲಗಣ್ಣಿನ ಕೆಳಗಡೆ ಮಚ್ಚೆ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ, ಹಸಿರು ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಅಥವಾ 100, ಎಸ್.ಪಿ ಕಚೇರಿ ದೂ.08392-258400, ಬಳ್ಳಾರಿ ನಗರ ಡಿ.ಎಸ್.ಪಿ ಕಚೇರಿ ದೂ.08392-27232, ಮೊ.9480803020, ಮಹಿಳಾ ಪೊಲೀಸ್ ಠಾಣೆಯ ದೂ.08392-268108 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ