ಮಂಗಳವಾರ, ಜನವರಿ 13, 2026

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜ.13(ಕರ್ನಾಟಕ ವಾರ್ತೆ): ನಗರದ ರೈಲ್ವೇ ನಿಲ್ದಾಣದ ಬಳಿಯ ಟಿಕೆಟ್ ಕೌಂಟರ್ ಬಳಿ ಸುಮಾರು 60 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಬಳಲಿ ಮಲಗಿದ್ದ ಸ್ಥಳದಲ್ಲಿಯೇ ಜ.12 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ 5.6 ಅಡಿ, ಕೋಲು ಮುಖ, ತೆಳುವಾದ(ಬಡಕಲು)ದೇಹ, ಗೋಧಿ ಮೈಬಣ್ಣ, ದಪ್ಪನೆಯ ಮೂಗು, ಅಗಲವಾದ ಹಣೆ, ತಲೆಯಲ್ಲಿ ಸುಮಾರು 02 ಇಂಚು ಕಪ್ಪು ಕೂದಲು ಮತ್ತು ಕಪ್ಪು ಮಿಶ್ರಿತ ಬಿಳಿಯ ಗಡ್ಡ, ಮೀಸೆ ಬಿಟ್ಟಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆ: ಕಪ್ಪು ಗೆರೆಯುಳ್ಳ ಬಿಳಿ ಬಣ್ಣದ ತುಂಬು ತೋಳಿನÀ ಅಂಗಿ, ಬಿಳಿ ಬಣ್ಣದ ಕಾಟನ್ ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಬೆಡ್ ಶೀಟ್, ಒಂದು ಜೊತೆ ಕೆಂಪು ಬಣ್ಣದ ಚಪ್ಪಲಿ ಹಾಕಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಮೊ.9480802131 ಅಥವಾ ರಾಯಚೂರು ರೈಲ್ವೇ ಪೊಲೀಸ್ ವೃತ್ತದ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ