ಶನಿವಾರ, ಜನವರಿ 3, 2026

ಮಸ್ಜಿದ್ ಎ ಅಬುಬಕ್ಕರ್(ಸುನ್ನಿ) ವಕ್ಫ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಚುನಾವಣೆ ವೇಳಾಪಟ್ಟಿ ಪ್ರಕಟ

ಬಳ್ಳಾರಿ,ಜ.03(ಕರ್ನಾಟಕ ವಾರ್ತೆ): ನಗರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬರುವ ವಕ್ಫ್ ಸಂಸ್ಥೆಯಾದ ಮಸ್ಜಿದ್ ಎ ಅಬುಬಕ್ಕರ್(ಸುನ್ನಿ) ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಜ.03 ರಿಂದ 24 ರವರೆಗೆ ಚುನಾವಣಾ ಪ್ರಕ್ರಿಯೆಯು ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಚುನಾವಣಾ ನಾಮಪತ್ರವನ್ನು ಜ.05 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 02.30 ಗಂಟೆಯವರೆಗೆ ಬಳ್ಳಾರಿ ನಗರದ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಜ.12 ರಂದು ಮಧ್ಯಾಹ್ನ 02.30 ರೊಳಗೆ ಸಲ್ಲಿಸಬೇಕು. ನಾಮಪತ್ರ ಪರಿಶೀಲನೆ ಜ.13 ರ ಬೆಳಿಗ್ಗೆ 11.30 ರಿಂದ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜ.14 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ಗಂಟೆಯ ವರೆಗೆ ಅವಕಾಶ. ಅದೇ ದಿನ ಮಧ್ಯಾಹ್ನ 03.30 ರ ನಂತರ ಚುನಾವಣಾ ಚಿನ್ಹೆಗಳನ್ನು ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಜ.24 ರಂದು ಶನಿವಾರ ಬೆಳಿಗ್ಗೆ 09 ರಿಂದ ಮಧ್ಯಾಹ್ನ 04 ಗಂಟೆಯವರೆಗೆ ಕೌಲ್ ಬಜಾರ್ ಮಸ್ಜಿದ್ ಎ ಅಬುಬಕ್ಕರ್(ಸುನ್ನಿ) ವಕ್ಫ್ ಸಂಸ್ಥೆಗೆ ಚುನಾವಣೆ ನಡೆಸಿ, ಅದೇ ದಿನ ಸಂಜೆ 05 ಗಂಟೆಯಿAದ ಮತ ಎಣಿಕೆ ನಡೆಸಲಾಗುವುದು ಎಂದು ಕೌಲ್ ಬಜಾರ್ ನ ಮಸ್ಜಿದ್ ಎ ಅಬುಬಕ್ಕರ್ (ಸುನ್ನಿ) ಚುನಾವಣಾಧಿಕಾರಿ ಆದ ಕಲಬುರುಗಿ ವಿಭಾಗೀಯ ವಕ್ಫ್ ಅಧಿಕಾರಿ ನೂರ್ ಪಾಷಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ