ಶುಕ್ರವಾರ, ಮಾರ್ಚ್ 13, 2026

ಅನಾಮಧೇಯ ಮೃತ ಮಹಿಳೆ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮಾ.13(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಂ.01 ರ ಮೇಲೆ ಬಿ.ವೈ.ಸಿ ಎಂಡ್ ಕಡೆ ಮಲಗಿದ್ದ ಸುಮಾರು 50 ವರ್ಷದ ಅನಾಮಧೇಯ ಮಹಿಳೆಯು ಮಾ.12 ರಂದು ಯಾವುದೋ ಖಾಯಿಲೆಯಿಂದ ಬಳಲಿ ಸರಿಯಾದ ಸಮಯಕ್ಕೆ ಔಷದೋಪಚಾರ ಸಿಗದೇ ಸ್ವಾಭಾವಿಕವಾಗಿ ಮೃತಪಟ್ಟಂತೆ ಕಂಡುಬAದಿದ್ದು, ಮೃತಳ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಕುರಿತು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಸುದಾರರ ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸ್ ಉಪ-ನಿರೀಕ್ಷಕರು ಕೋರಿದ್ದಾರೆ. ಚಹರೆ ಗುರುತು: ಸುಮಾರು ಎತ್ತರ 5.6 ಅಡಿ, ಕಪ್ಪು ಮೈ ಬಣ್ಣ, ಸಾಧರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ತಲೆಯಲ್ಲಿ ಸುಮಾರು 10 ಇಂಚು ಕಪ್ಪು ಕೂದಲು ಹೊಂದಿರುತ್ತಾರೆ. ಗುಲಾಬಿ ಬಣ್ಣದ ಬಿಳಿ ಬಟ್ಟೆಯುಳ್ಳ ಟವೆಲ್, ಕಪ್ಪು ಬಣ್ಣದ ಕುಪ್ಪಸ, ಕೇಸರಿ ಬಣ್ಣದ ಸೀರೆ, ಉಡದಾರ, ತಿಳಿ ಗುಲಾಬಿ ಬಣ್ಣದ ಒಳ ಉಡುಪು ಧರಿಸಿದ್ದು, ಮೂಗಿನಲ್ಲಿ ಮೂಗುತಿ ಇರುತ್ತದೆ. ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ ದೂ.08392-276063, ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ.080-22871291 ಗೆ ಕರೆಮಾಡಿ ಮಾಹಿತಿ ನೀಡಬಹುದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ