ಸೋಮವಾರ, ಮಾರ್ಚ್ 9, 2026
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಮಾ.09(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 45 ವರ್ಷದ ಅನಾಮಧೇಯ ವ್ಯಕ್ತಿಯು ಕಾರಿಗನೂರು ಮತ್ತು ಪಾಪಿನಾಯಕನ ಹಳ್ಳಿ ರೈಲು ನಿಲ್ದಾಣಗಳ ಮದ್ಯೆ ರೈಲ್ವೇ ಕಿ.ಮೀ ನಂ:153/4-5 ರ ಮಧ್ಯದ ರೈಲು ಹಳಿಯಲ್ಲಿ ಮಾ.07 ರಂದು ಮೃತಪಟ್ಟಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ಸಾರ್ವಜನಿಕರು ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಪಟ್ಟಿ: ಸುಮಾರು ಎತ್ತರ 5.5 ಕಪ್ಪು ಮೈ ಬಣ್ಣ, ತಲೆಯು ರೈಲು ಗಾಡಿಗೆ ಸಿಕ್ಕು ಚಿದ್ರ-ಚಿದ್ರ ವಾಗಿದ್ದು ಚಹರೆ ಸ್ಪಷ್ಟವಾಗಿರುವುದಿಲ್ಲ. ಮೃತನ ಮೈಮೇಲೆ ಬಿಳಿಯ ಬಣ್ಣದ ಹರಿದ ಬನಿಯನ್, ನೀಲಿ ಬಣ್ಣದ ಚೆಕ್ಸ್ ಲುಂಗಿ, ನೀಲಿ ಬಣ್ಣದ ಅಂಡರವೇರ್, ನೀಲಿ ಬಣ್ಣದ ಚೆಕ್ಸ್ ಟವೆಲ್ ಇದ್ದು, ಸೊಂಟದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಉಡದಾರ ಇರುತ್ತದೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ ದೂ.08392-276063 ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ.080-22871291 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ