ಮಂಗಳವಾರ, ಮಾರ್ಚ್ 10, 2026
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಮಾ.10(ಕರ್ನಾಟಕ ವಾರ್ತೆ):
ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರದ ರೈಲ್ವೆ ಬ್ರಿಡ್ಜ್ ಬಳಿ ಸುಮಾರು 40-45 ವರ್ಷದ ಅನಾಮಧೇಯ ವ್ಯಕ್ತಿಯು ಅಸ್ವಸ್ಥನಂತೆ ಕಂಡುಬAದಿದ್ದು, ಯಾವುದೋ ಖಾಯಿಲೆಗೆ ತುತ್ತಾಗಿ ಕೆಳಗೆ ಬಿದ್ದು ತಲೆಗೆ ಗಾಯವಾಗಿ ಮಾ.08 ರಂದು ಮೃತಪಟ್ಟಿದ್ದು, ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ, ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ:
ಎತ್ತರ 5.5 ಅಡಿ, ಎಣ್ಣೆಗೆಂಪು ಮೈ ಬಣ್ಣ, ತಲೆಯಲ್ಲಿ ಚಿಕ್ಕ ಕಪ್ಪು ಕೂದಲು, ಹಣೆಯ ಮಧ್ಯದಲ್ಲಿ ಗಾಯವಾಗಿರುತ್ತದೆ. ಬಲಗೈಯಲ್ಲಿ ದುರ್ಗಮ್ಮ ಎಂದು ಹಚ್ಚೆಹಾಕಿಸಿಕೊಂಡಿದ್ದು, ಹಳದಿ ಬಣ್ಣದ ಅರ್ಧತೋಳಿನ ಟೀ-ಶರ್ಟ್ ಧರಿಸಿರುತ್ತಾನೆ.
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ, ಬ್ರೂಸ್‌ಪೇಟ್ ಪೊಲೀಸ್ ಠಾಣೆ ದೂ.08392-272022, ಪಿಎಸ್‌ಐ ದೂ.9480803081, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ