ಗುರುವಾರ, ಮಾರ್ಚ್ 12, 2026

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮಾ.12(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯ ತೋರಣಗಲ್ಲು ರೈಲ್ವೇ ನಿಲ್ದಾಣದ ರೈಲ್ವೇ ಬುಕಿಂಗ್ ಕಚೇರಿ ಮುಂಭಾಗ ಸುಮಾರು 70 ವರ್ಷದ ಅನಾಮಧೇಯ ವ್ಯಕ್ತಿಯು ಮಾ.11 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ವಾರಸುದಾರರ ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತನಿಖಾಧಿಕಾರಿ ಮನವಿ ಮಾಡಿದ್ದಾರೆ. ಮೃತನ ಚಹರೆ ಪಟ್ಟಿ: ಸುಮಾರು ಎತ್ತರ 5.5 ಅಡಿ, ಕಪ್ಪು ಮೈ ಬಣ್ಣ, ಸದೃಢವಾದ ದೇಹ, ಅಗಲ ಹಣೆ, ದುಂಡು ಮೂಖ, ಬೋಳು ತಲೆ, ಬಿಳಿಯ ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ . ಮೃತನ ಮೈ ಮೇಲಿನ ಬಟ್ಟೆ: ಬಿಳಿಯ ಬಣ್ಣದ ಕಪ್ಪು ಗೆರೆಯುಳ್ಳ ತುಂಬು ತೋಳಿನ ಶರ್ಟ್, ಕೆಂಪು ಬಣ್ಣದ ಬಿಳಿ ಪಟ್ಟಿಯುಳ್ಳ ಸ್ವೇಟರ್, ತಿಳಿ ನೀಲಿ ಬಣ್ಣದ ಲುಂಗಿ, ಕೆಂಪು ಬಣ್ಣದ ಕಪ್ಪು ಗೆರೆಯುಳ್ಳ ಮತ್ತು ಹೂವಿನ್ ಡಿಸೈನ್ ಇರುವ ಲುಂಗಿ ಮತ್ತು ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ದೂ.08392-276063 ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ.080-22871291 ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ