ಶುಕ್ರವಾರ, ಮಾರ್ಚ್ 13, 2026
ಕಂಪ್ಲಿ: ಮಾ.15 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮಾ.13(ಕರ್ನಾಟಕ ವಾರ್ತೆ):
ಕಂಪ್ಲಿ ಜೆಸ್ಕಾಂ 110/11ಕೆವಿ ಕಂಪ್ಲಿ ಉಪಕೇಂದ್ರದ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಮಾ.15 ರಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಕಂಪ್ಲಿ ನಗರ, ನಂ-10 ಮುದ್ದಾಪುರ, ಕಣಿವೆ ತಿಮ್ಮಾಪುರ, ರಾಮಸಾಗರ, ದೇವಸಮುದ್ರ, ಹಂಪಾದೇವನ ಹಳ್ಳಿ, ಜಾಯಿಗನೂರು, ಕುಂಬಾರ್ ಕ್ಯಾಂಪ್, ಕಂಪ್ಲಿ ಕೊಟ್ಟಾಲ್, ಕೃಷನಗರ ಕ್ಯಾಂಪ್.
33/11 ಕೆವಿ ಕಂಪ್ಲಿ ಉಪಕೇಂದ್ರದ ಎಫ್-3 ಬೆಳಗೊಡುಹಾಳು, ಎಫ್-4 ರಾಮಸಾಗರ, ಎಫ್-5 ಗೌರಮ್ಮ ಕೆರೆ ಮತ್ತು 33/11 ಕೆವಿ ಇಟಗಿ ಉಪಕೇಂದ್ರಕ್ಕೆ ಸಂಬAದಿಸಿದ ಎಫ್-2 ಸಣಾಪುರ ಐಪಿ ಮಾರ್ಗದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಬೆಳಿಗ್ಗೆ 4 ರಿಂದ 10 ರವರೆಗೆ ಬಾಕಿ ಉಳಿದ ಸಮಯವನ್ನು ಸಂಜೆ 5 ಗಂಟೆಯ ನಂತರ ಐಪಿ ಸೆಟ್ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು.
ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ