ಶುಕ್ರವಾರ, ಏಪ್ರಿಲ್ 17, 2026

ಕೊಳಗಲ್ಲು: ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗೆ ಶೇ.100 ರಷ್ಟು ಫಲಿತಾಂಶ

ಬಳ್ಳಾರಿ,ಏ.17(ಕರ್ನಾಟಕ ವಾರ್ತೆ): ನಗರದ ಸಮೀಪದ ಕೊಳಗಲ್ಲಿನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಇ ಪಠ್ಯಕ್ರಮ) 2025-26ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ರಷ್ಟು ಅತ್ಯುತ್ತಮ ಗುಣಾತ್ಮಕ ಫಲಿತಾಂಶ ದಾಖಲಿಸಿದೆ. *ಫಲಿತಾಂಶದ ವಿವರ:* ಶಾಲೆಯ ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅತ್ಯುತ್ತಮ ದರ್ಜೆ-24 ವಿದ್ಯಾರ್ಥಿಗಳು, ಉತ್ತಮ ದರ್ಜೆ-20 ವಿದ್ಯಾರ್ಥಿಗಳು, ದ್ವಿತೀಯ ದರ್ಜೆ-11 ವಿದ್ಯಾರ್ಥಿಗಳು ಮತ್ತು ತೃತೀಯ ದರ್ಜೆ-01 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. *ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು:* ಅಸ್ಮಾ ಕೌಸರ್-ಶೇ.90.8, ಅಬ್ದುಲ್ ರಿಯಾಜ್ ಎಂ-ಶೇ.88.4, ಪಿ.ಸಬಿನಾಬಿ-ಶೇ.87.8, ಮುಸ್ಕಾನ್ ಎಸ್-ಶೇ.86.2, ಈರಪ್ಪ.ಡಿ-85.6 ಮತ್ತು ಪ್ರಥಮ ಕುಮಾರ್.ಕೆ-ಶೇ.85. ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ (ಬೆಂಗಳೂರು) ನಿರ್ದೇಶಕರು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹರ್ಷ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ವೃಂದದ ಶ್ರಮ, ವಿದ್ಯಾರ್ಥಿನಿಯರ ಶಿಸ್ತು ಮತ್ತು ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಸಾಧಕ ವಿದ್ಯಾರ್ಥಿನಿಯರಿಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕ ಮತ್ತು ಸಿಬ್ಬಂದಿ ವರ್ಗಕ್ಕೆ ಶಾಲೆಯ ಪ್ರಾಂಶುಪಾಲ ಮೂಕಪ್ಪ ಕೆ.ಎಂ. ಅವರು ಅಭಿನಂದನೆ ಸಲ್ಲಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ