ಗುರುವಾರ, ಏಪ್ರಿಲ್ 16, 2026

ಏ.18 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಏ.16(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯ ಶ್ರೀಧರಗಡ್ಡೆ ವಿದ್ಯುತ್ ಸರಬರಾಜು ಕೇಂದ್ರದ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಏ.18 ರಂದು ಬೆಳಿಗ್ಗೆ 08 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-6 ವ್ಯಾಪ್ತಿಯ ತಾಳೂರು ರೋಡ್, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್‌ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ರಾಮ ನಗರ, ಪಾರ್ವತಿ ನಗರ, ಬಾಲಾಜಿ ಕಾಲೋನಿ, ಗಂಗಮ್ಮ ಕಾಲೋನಿ, ಜಿಲ್ಲಾ ಕೋರ್ಟ್ ಸಂಕೀರ್ಣ. ಎಫ್-8 ವ್ಯಾಪ್ತಿಯ ಇಂದಿರಾ ನಗರ, ಎಂ.ಕೆ.ನಗರ, ಅವಂಬಾವಿ, ಅಶೋಕ ನಗರ, ವೀರಣ್ಣಗೌಡ ಕಾಲೋನಿ, ವಿರಾಟ್ ನಗರ ಮತ್ತು ರಾಮನಗರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ