ಸೋಮವಾರ, ಏಪ್ರಿಲ್ 27, 2026
ಕುವೆಂಪು ವಿವಿಯಿಂದ ಐಪಿಎಸ್ ಅಧಿಕಾರಿ ಹರ್ಷ.ಪಿ.ಎಸ್ ಅವರಿಗೆ ಪಿಎಚ್.ಡಿ ಪದವಿ ಘೋಷಣೆ
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ಕುವೆಂಪು ವಿಶ್ವವಿದ್ಯಾಲಯವು ವನ್ಯಜೀವಿ ಮತ್ತು ನಿರ್ವಹಣೆ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ಬಳ್ಳಾರಿ ವಲಯ ಉಪಮಹಾನಿರೀಕ್ಷಕರು ಹಾಗೂ ಐಪಿಎಸ್ ಅಧಿಕಾರಿ ಹರ್ಷ.ಪಿ.ಎಸ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಘೋಷಿಸಿದೆ.
ಪಿ.ಎಸ್. ಹರ್ಷ ಅವರು, ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಡಾ.ವಿಜಯ ಕುಮಾರ ಅವರ ಮಾರ್ಗದರ್ಶನದಲ್ಲಿ “ನಾಗರಹೊಳೆ, ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆಯ ಸ್ಥಿರತೆ ಹಾಗೂ ಮಾನವ-ಹುಲಿ ಸಂಘರ್ಷ ಮತ್ತು ಅದರ ಪ್ರಭಾವಗಳ ಕುರಿತಾದ ಒಂದು ಅಧ್ಯಯನ” (A Study on Stability of Tiger Population in Nagarahole, Bandipur and BRT Tiger Reserves with special reference to Human-Tiger Conflicts and its impact) ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.
ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಮತ್ತು ಸಿಂಡಿಕೇಟ್ ಈ ಶಿಫಾರಸನ್ನು ಅಂಗೀಕರಿಸಿದ್ದು, ಮುಂಬರುವ ಘಟಿಕೋತ್ಸವದಲ್ಲಿ ಹರ್ಷ.ಪಿ.ಎಸ್ ಅವರು ಅಧಿಕೃತವಾಗಿ ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ