ಮಂಗಳವಾರ, ಏಪ್ರಿಲ್ 14, 2026
ವಾರಸುದಾರರಿಲ್ಲದ ಅಪರಿಚಿತ ವ್ಯಕ್ತಿಯ ಶವ ಪತ್ತೆ - ಗುರುತು ಪತ್ತೆಗೆ ಪೊಲೀಸರ ಮನವಿ
ಬಳ್ಳಾರಿ,ಏ.14(ಕರ್ನಾಟಕ ವಾರ್ತೆ):
ನಗರದಲ್ಲಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತರ ವಾರಸುದಾರರ ಪತ್ತೆಗಾಗಿ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿಯವರು ಸಾರ್ವಜನಿಕರ ನೆರವು ಕೋರಿದ್ದಾರೆ.
ಏ.09 ರಂದು ಬೆಳಿಗ್ಗೆ ಸುಮಾರು 07.45 ಗಂಟೆಯ ಸಮಯದಲ್ಲಿ ಬಳ್ಳಾರಿ ನಗರದ ಬೆಂಗಳೂರು ರಸ್ತೆಯ ಕಾಳಮ್ಮ ರಸ್ತೆ ಹತ್ತಿರವಿರುವ ಬೆಂಗಳೂರು ಬೇಕರಿ ಬಳಿ ಅಪರಿಚಿತ ವ್ಯಕ್ತಿಯು ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬAದಿದ್ದರು. ಕೂಡಲೇ ಸಾರ್ವಜನಿಕರು ಅಂಬ್ಯುಲೆನ್ಸ್ ಮೂಲಕ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಚಹರೆ ಗುರುತು: ಎತ್ತರ ಅಂದಾಜು 5.5 ಅಡಿ, ಸಾಧಾರಣ ಮೈಕಟ್ಟು, ಎಣ್ಣೆಗಂಪು ಬಣ್ಣ, ದುಂಡು ಮುಖ ಹೊಂದಿದ್ದು, ತಲೆಯಲ್ಲಿ ಚಿಕ್ಕ ಕಪ್ಪು ಕೂದಲು, ಮುಖದಲ್ಲಿ ಬಿಳಿ ಗಡ್ಡ ಹಾಗೂ ಮೀಸೆ ಇರುತ್ತದೆ. ಪಾಚಿ ಬಣ್ಣದ ಉದ್ದನೆಯ ತೋಳಿನ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ.
ಮೃತನ ವಿಳಾಸ ಅಥವಾ ಅವರ ಸಂಬAಧಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆ ದೂ.08392-272022, ಪಿ.ಎಸ್.ಐ ಮೊ.9480803081 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, 258102 ಗೆ ಕರೆ ಮಾಡಬಹುದು ಎಂದು ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ