ಮಂಗಳವಾರ, ಏಪ್ರಿಲ್ 21, 2026

ಅಪರಿಚಿತ ವ್ಯಕ್ತಿ ಸಾವು - ವಾರಸುದಾರರ ಪತ್ತೆಗೆ ಪೊಲೀಸರ ಮನವಿ

ಬಳ್ಳಾರಿ,ಏ.21(ಕರ್ನಾಟಕ ವಾರ್ತೆ): ಕುಡತಿನಿ ಪಟ್ಟಣದ ನಯನಸ್ವಾಮಿ ಹೋಟೆಲ್ ನ ಪಕ್ಕದ ಕಟ್ಟೆಯ ಮೇಲೆ ಸುಮಾರು 50-55 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮಲಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳದೇ ಏ.18 ರಂದು ಮೃತಪಟ್ಟಿದ್ದು, ಮೃತರ ಗುರುತು ಪತ್ತೆಯಾಗಿಲ್ಲದ ಕಾರಣ, ವಾರಸುದಾರರನ್ನು ಪತ್ತೆಹಚ್ಚಲು ಕುಡುತಿನಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಮೃತರ ಪತ್ತೆಗಾಗಿ ಅವರ ಅಂಗಿ ಮತ್ತು ಪ್ಯಾಂಟ್ ಜೇಬುಗಳನ್ನು ಪರಿಶೀಲಿಸಿದಾಗ ಯಾವುದೇ ಗುರುತಿನ ಚೀಟಿ ಅಥವಾ ಮೊಬೈಲ್ ಪತ್ತೆಯಾಗಿರುವುದಿಲ್ಲ. ಸದ್ಯ ಮೃತದೇಹವನ್ನು ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಚಹರೆ: ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಬೂದು ಬಣ್ಣದ ತುಂಬು ತೋಳಿನ ಅಂಗಿ (ಅದರ ಮೇಲೆ ನೀಲಿ ಹಾಗೂ ಬಿಳಿ ಬಣ್ಣದ ಎಲೆ ಮತ್ತು ಹೂವಿನ ಚಿತ್ರವಿದೆ) ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಅಪರಿಚಿತ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಡಿ.ಎಸ್.ಪಿ- 9480803010, ಕುರುಗೋಡು ವೃತ್ತ ಸಿ.ಪಿ.ಐ-9480803039, ಕುಡುತಿನಿ ಪೊಲೀಸ್ ಠಾಣೆ ಪಿ.ಎಸ್.ಐ- 9480803078 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ