ಬುಧವಾರ, ಏಪ್ರಿಲ್ 22, 2026

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಏ.22(ಕರ್ನಾಟಕ ವಾತೆ): ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ನಗರದ ಕಾಳಮ್ಮ ಬೀದಿಯ ನಿವಾಸಿಯಾದ ಬಿ.ನರಸಣ್ಣ ಎನ್ನುವ 50 ವರ್ಷದ ವ್ಯಕ್ತಿ ಏ.06 ರಂದು ಹೊರ ಹೋಗಿ ಬರುವುದಾಗಿ ಹೇಳಿ ಮರಳಿ ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ವ್ಯಕ್ತಿಯ ಚಹರೆ: ಅಂದಾಜು ಎತ್ತರ 5.5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಸಣ್ಣ ಕೂದಲು, ಚಿಕ್ಕ ಮೀಸೆ ಹೊಂದಿದ್ದು, ಎಡ ಮೊಣಕೈಯ ಮೇಲೆ ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ, ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‌ಪೇಟ್ ಪೊಲೀಸ್ ಠಾಣೆ ದೂ.08392-272022, ಪಿಎಸ್‌ಐ ಮೊ.9480803081, ಪಿಐ ಮೊ.9480803045, ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ