ಮಂಗಳವಾರ, ಡಿಸೆಂಬರ್ 12, 2023

ಕಡತಗಳ ವಿಲೇವಾರಿ: ದರಪಟ್ಟಿಗಳಿಗೆ ಆಹ್ವಾನ

ಬಳ್ಳಾರಿ,ಡಿ.12(ಕರ್ನಾಟಕ ವಾರ್ತೆ): ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ 2011ರಿಂದ 2015ರವರೆಗೆ ವಿಲೇವಾರಿಯಾಗಿ ಕಾಲಾವಧಿ ಮೀರಿರುವ ಪ್ರಕರಣಗಳ ಸಂಪೂರ್ಣ ದಾಖಲೆಗಳನ್ನು ಚೂರು ಚೂರುಗೊಳಿಸಿ ಮಾರಾಟ ಮಾಡಲು ಇಚ್ಛಿಸಿದ್ದು, ಆಸಕ್ತಿ ಇರುವವರಿಂದ ದರಪಟ್ಟಿ ಸಲ್ಲಿಸಲು ಆಹ್ವಾನಿಸಲಾಗಿದೆ. ಹೆಚ್ಚಿನ ದರದಲ್ಲಿ ಖರೀದಿಸಲು ಆಸಕ್ತಿಯುಳ್ಳವರು ದರಪಟ್ಟಿಯನ್ನು ಲಕೋಟೆಯಲ್ಲಿ ಸೀಲ್ ಮಾಡಿ ಅದರ ಮೇಲೆ “ಹಳೆಯ ದಾಖಲೆಗಳ ಖರೀದಿಗಾಗಿ ದರಪಟ್ಟಿ” ಎಂದು ನಮೂದಿಸಿ ಸೀಲ್ ಮಾಡಿದ ದರಪಟ್ಟಿಯನ್ನು ಅಧ್ಯಕ್ಷರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬಳ್ಳಾರಿ, ಇವರಿಗೆ ಡಿ.20 ರಂದು ಸಂಜೆ 5.30ರೊಳಗಾಗಿ ತಲುಪುವಂತೆ ಸಲ್ಲಿಸಬೇಕು. ನಿಗಧಿತ ದಿನಾಂಕ ಹಾಗೂ ಸಮಯದ ನಂತರ ತಲುಪುವ ದರಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ತಿರಸ್ಕರಿಸಲಾಗುವುದು. ದರಪಟ್ಟಿಯನ್ನು ಅಂಗೀಕರಿಸುವ, ತಿರಸ್ಕರಿಸುವ ಅಥವಾ ಪ್ರಕಟಣೆಯನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಹೊಂದಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ