ಸೋಮವಾರ, ಡಿಸೆಂಬರ್ 11, 2023
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಡಿ.11(ಕರ್ನಾಟಕ ವಾರ್ತೆ):
ಹೊಸಪೇಟೆ ರೈಲ್ವೇ ನಿಲ್ದಾಣದ ವೇದಿಕೆ ನಂ.01ರ ಕುಡಿಯುವ ನೀರಿನ ತೊಟ್ಟಿ ಬಳಿ ಡಿ.10ರಂದು ಸುಮಾರು 50-55 ವರ್ಷದ ವಿಶೇಷಚೇತನ ಅನಾಮಧೇಯ ವ್ಯಕ್ತಿಯು ನೀರು ಕುಡಿಯಲು ಹೋಗಿ ಉರುಗೋಲು ಮತ್ತು ಕಾಲು ಜಾರಿ ಆಯಾತಪ್ಪಿ ಕೆಳಗಡೆ ಬಿದ್ದಿದ್ದು, ತಲೆಯ ಹಿಂದೆ ಭಾರಿಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ.
ಚಹರೆ ಗುರುತು: ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಅಗಲ ಮುಖ, ದೊಡ್ಡ ಕಿವಿಗಳು, ದಪ್ಪ ಮೂಗು, ಅಗಲವಾದ ಹಣೆ ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 02 ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು ಹಾಗೂ ಅರ್ಧ ಇಂಚು, ಬಿಳಿ ಮಿಶ್ರಿತ ಕಪ್ಪು ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ.
ಮೃತನ ಮೈಮೇಲಿನ ಬಟ್ಟೆಗಳು: ತಿಳಿ ಹಳದಿ ಬಣ್ಣದ ತುಂಬುತೋಳಿನ ಅಂಗಿ, ನೀಲಿ ಬಣ್ಣದ ನೈಟ್ ಪ್ಯಾಂಟ್, ಹಳದಿ ಬಣ್ಣದ ಮಾಸ್ಕ್ ಹಾಗೂ ಅಲ್ಯೂಮಿನಿಯಂ ಉರುಗೋಲು ಇರುತ್ತವೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ