ಮಂಗಳವಾರ, ಫೆಬ್ರವರಿ 6, 2024

ವಿವಿಧೆಡೆ ವಿದ್ಯುತ್ ಫೆ.07 ರಂದು

ಬಳ್ಳಾರಿ,ಫೆ.06(ಕರ್ನಾಟಕ ವಾರ್ತೆ): ನಗರದ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11ಕೆವಿ ಅಲ್ಲೀಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-34, ಎಫ್-40, ಎಫ್-73 ಎಫ್-72 ಫೀಡರ್‍ಗಳ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಫೆ.07 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ ನಗರದ ವಡ್ಡೆ ನಾಗಪ್ಪ ಲೇಔಟ್, ಮೊಹಮ್ಮದಿಯಾ ಸ್ಕೂಲ್, ರೇಡಿಯೋ ಪಾರ್ಕ್, ಕೌಲ್ ಬಜಾರ್, ನಲಾ ಸ್ಟ್ರೀಟ್, ಪೊಲೀಸ್ ಸ್ಟೇಷನ್, ಉರ್ದು ಟ್ರೈನಿಂಗ್ ಸ್ಕೂಲ್, ಕಂಟೋನ್‍ಮೆಂಟ್, ಸೂರ್ಯ ಕಾಲೋನಿ, ತಿಲಕ್ ನಗರ, ಐಶ್ವರ್ಯ ಕಾಲೋನಿ, ರೇಡಿಯೋ ಪಾರ್ಕ್, ಕುವೆಂಪು ನಗರ, ಸುಧಾ ಕ್ರಾಸ್, ಕೋಟೆ ಏರಿಯಾ, ಇನ್‍ಫ್ಯಾಂಟ್ರಿ ರೋಡ್ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ