ಮಂಗಳವಾರ, ಫೆಬ್ರವರಿ 13, 2024

ಬಳ್ಳಾರಿ ಮಹಾನಗರ ಪಾಲಿಕೆ: ಪ್ಲಾಸ್ಟಿಕ್ ವಸ್ತು ವಿಲೇವಾರಿ ಮಾಡಲು ಅರ್ಹ ಏಜೆನ್ಸಿಗಳಿಂದ ಅರ್ಜಿ ಆಹ್ವಾನ

ಬಳ್ಳಾರಿ,ಫೆ.13(ಕರ್ನಾಟಕ ವಾರ್ತೆ): ನಗರದಲ್ಲಿ ವಿವಿಧೆಡೆ ಮಹಾನಗರ ಪಾಲಿಕೆಯಿಂದ ಜಪ್ತಿ ಮಾಡಲಾದ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ವಿಲೇವಾರಿ ಮಾಡಲು ಅರ್ಹ ಏಜೆನ್ಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಖಲೀಲ್ ಸಾಬ್ ಅವರು ತಿಳಿಸಿದ್ದಾರೆ. ಇತ್ತೀಚಿಗೆ ನಗರದ ಕೆಲವೆಡೆ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಮೇಲೆ ದಾಳಿ ನಡೆಸಿ ಜಪ್ತಿ ಮಾಡಲಾಗಿದ್ದು, ಜಪ್ತಿ ಮಾಡಲಾದ ಪ್ಲಾಸ್ಟಿಕ್ ವಸ್ತುಗಳನ್ನು ‘ಎಂಡ್ ಆಫ್ ಲೈಫ್’ ಮಾಡಲು ಕೆಎಸ್‍ಪಿಸಿಬಿ ಇಂದ ಅಧಿಕೃತ ಪರವಾನಿಗೆ ಪಡೆದ ಹಾಗೂ ಪ್ಲಾಸ್ಟಿಕ್ ರಿ-ಸೈಕ್ಲರ್ಸ್ ಅಥವಾ ಅಧಿಕೃತ ಸಿಮೆಂಟ್ ಇಂಡಸ್ಟ್ರೀಸ್/ವೇಸ್ಟ್-ಟು ಎನರ್ಜಿ ಪ್ಲಾಂಟ್ ಜೊತೆ ಒಪ್ಪಂದ ಮಾಡಿಕೊಂಡಿರುವ ಏಜೆನ್ಸಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ಲಾಸ್ಟಿಕ್‍ನ್ನು ಪಾಲಿಕೆಯಿಂದ ಸಂಗ್ರಹಿಸಿ ಕೆಎಸ್‍ಪಿಸಿಬಿ ನಿಯಮಾನುಸಾರ ಸಿಮೆಂಟ್/ವೇಸ್ಟ್-ಟು ಎನರ್ಜಿ ಪ್ಲ್ಯಾಂಟ್‍ಗಳಿಗೆ ಸಾಗಿಸಿದ ಪರಿಮಾಣಕ್ಕೆ ಇಪಿಆರ್ ಪಾಯಿಂಟ್ಸ್‍ಗಳನ್ನು ಪಾಲಿಕೆಯ ಖಾತೆಗೆ ವರ್ಗಾಯಿಸಬೇಕು ಹಾಗೂ ಸಂಬಂಧಪಟ್ಟ ಬಳಕೆದಾರರಿಂದ ಸೂಕ್ತ ಪ್ರಮಾಣ ಪತ್ರ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಫೆ.16 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಅಥವಾ ದೂ.08392-273479 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ