ಗುರುವಾರ, ಫೆಬ್ರವರಿ 29, 2024
ಅನುಪಯುಕ್ತ ಪರಿಕರಗಳ ಬಹಿರಂಗ ಹರಾಜು
ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ):
ಬಳ್ಳಾರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಇರುವ ಅನುಪಯುಕ್ತ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಪರಿಕರಗಳ, ಪೀಠೋಪಕರಣಗಳ ಹಾಗೂ ಕಚೇರಿಯ ಇಲಾಖಾ ವಾಹನಗಳ ಹಳೆ ಟೈರ್‍ಗಳ, ವಾಹನಗಳ ರಿಪೇರಿ ನಂತರ ಬದಲಾಯಿಸಿದ ಅನುಪಯುಕ್ತ ಬಿಡಿಭಾಗಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮಾರ್ಚ್ 14ರಂದು ವಿಲೇವಾರಿ ಮಾಡಲಾಗುತ್ತದೆ ಎಂದು ಕರ್ನಾಟಕ ಲೋಕಯುಕ್ತ ಪೊಲೀಸ್ ಅಧೀಕ್ಷಕರಾದ ಸಿದ್ಧರಾಜು.ಸಿ ಅವರು ತಿಳಿಸಿದ್ದಾರೆ.
ಅನುಪಯುಕ್ತ ಪರಿಕರಗಳನ್ನು ಖರೀದಿಸಲು ಡಿ.ಡಿ ರೂಪದಲ್ಲಿ ರೂ.1000 ಮೊತ್ತದ ಇ.ಎಂ.ಡಿ ಜೊತೆಗೆ ದಿನಾಂಕ ಮಾರ್ಚ್ 11 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಎಸ್.ಪಿ ಲೋಕಾಯುಕ್ತ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿಯ ಎಸ್.ಪಿ ಲೋಕಾಯುಕ್ತ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ