ಶುಕ್ರವಾರ, ಫೆಬ್ರವರಿ 23, 2024

ಯುವತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಫೆ.23(ಕರ್ನಾಟಕ ವಾರ್ತೆ): ಸಂಡೂರು ಪಟ್ಟಣದ 04 ನೇ ವಾರ್ಡ್ ಅಶೋಕ್ ಡೈರಿ ಫಾರಂ ಹತ್ತಿರದ ನಿವಾಸಿಯಾದ ಅಪೂರ್ವ ತಂದೆ ಜೆ.ಪ್ರಕಾಶ ಎನ್ನುವ 18 ವರ್ಷದ ಯುವತಿಯು ಫೆ.15 ರಂದು ಮನೆಯಿಂದ ಹೊರಗಡೆ ಹೋಗಿಬರುವುದಾಗಿ ಹೇಳಿ, ಮರಳಿ ಬಾರದೇ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಂಡೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.2 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು 12 ಇಂಚು ಉದ್ದದ ಕಪ್ಪು ಕೂದಲು ಹೊಂದಿದ್ದು, ಎಡತುಟಿಯ ಮೇಲೆ ಒಂದು ಸಣ್ಣ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಟೀ-ಶರ್ಟ್, ಬಿಳಿ ಮಿಶ್ರಿತ ತುಂಬು ತೋಳಿನ ಜಾಕೆಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಡೂರು ಪೊಲೀಸ್ ಠಾಣೆಯ ಪಿಎಸ್‍ಐ ಅವರ ಮೊ.9480803061 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ