ಮಂಗಳವಾರ, ಫೆಬ್ರವರಿ 13, 2024

ಫೆ.15 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಫೆ.13(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110ಕೆ.ವಿ ಅಲ್ಲಿಪುರ-ಬಳ್ಳಾರಿ ಉತ್ತರ ಮಾರ್ಗದ ಲಿಲೋ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11ಕೆ.ವಿ ಸೋಮಸಮುದ್ರ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ಗುಡದೂರು ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11ಕೆ.ವಿ ಮಾರ್ಗಗಳಲ್ಲಿ ಫೆ.15 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 06 ಗಂಟೆಯರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-1 ಎನ್.ಜೆ.ವೈ ಬಾಲಾಜಿ ನಗರ್ ಕ್ಯಾಂಪ್ ಮಾರ್ಗದ ಕೊರ್ಲಗುಂದಿ, ವಿಜಯನಗರ ಕ್ಯಾಂಪ್, ಜಾಲಿಬೆಂಜಿ, ಬಾಲಾಜಿನಗರ ಕ್ಯಾಂಪ್, ಜ್ಯಾಲಿಬೆಂಜಿ. ಎಫ್-2 ಐ.ಪಿ ಸೆಟ್ ಫೀಡರ್ ಸೋಮಸಮುದ್ರ ಮಾರ್ಗದ ಸೋಮಸಮುದ್ರ, ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ ಕ್ಯಾಂಪ್, ಕೋಳೂರು, ಮದಿರೆ, ಕೊಳಗಲ್ಲು, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್ ಹಾಗೂ ಮುಂತಾದ ಗ್ರಾಮಗಳು. ಎಫ್-3 ಶ್ರೀಧರಗಡ್ಡೆ ಎನ್.ಜೆ.ವೈ ಫೀಡರ್ ಮಾರ್ಗದ ಸೋಮಸಮುದ್ರ, ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ ಕ್ಯಾಂಪ್, ಕೋಳೂರು, ಮದಿರೆ, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್ ಗ್ರಾಮ, ಕೋಳೂರು ಕ್ರಾಸ್, ದಮ್ಮೂರು, ಡಿ.ಕಗ್ಗಲ್, ವಿ.ಟಿ.ಕ್ಯಾಂಪ್ ಪ್ರದೇಶಗಳು. ಎಫ್-4 ಐ.ಪಿ ಸೆಟ್ ಕೊರ್ಲಗುಂದಿ ಫೀಡರ್ ಮಾರ್ಗದ ಕೊರ್ಲಗುಂದಿ, ಬಾಲಾಜಿನಗರ್ ಕ್ಯಾಂಪ್, ಜ್ಯಾಲಿಬೆಂಜಿ, ಶ್ರೀಧರಗಡ್ಡ, ವಿಜಯನಗರ ಕ್ಯಾಂಪ್. ಎಫ್-5 ಡಾಕ್ಟರ್ ಕ್ಯಾಂಪ್ ಮಾರ್ಗದ ಶ್ರೀಧರಗಡ್ಡೆ, ಗುಡಾರ್ ನಗರ. ಎಫ್-01 ಡಿ.ಕಗ್ಗಲ್ ಐಪಿ ಮಾರ್ಗದ ಡಿ.ಕಗ್ಗಲ್ ಗ್ರಾಮ. ಎಫ್-02 ಗುಡುದೂರು ಐಪಿ ಮಾರ್ಗದ ಗುಡುದೂರು, ಹಂದಿಹಾಳ್ ಗ್ರಾಮಗಳು. ಎಫ್-03 ಹಂದಿಹಾಳ್ ಐಪಿ ಮಾರ್ಗದ ಹಂದಿಹಾಳ್ ಚಾನಾಳ್ ಗ್ರಾಮಗಳು. ಎಫ್-04 ಗುಡುದೂರು ಎನ್.ಜೆ.ವೈ ಮಾರ್ಗದ ಹಂದಿಹಾಳ್, ಚಾನಾಳ್, ಗುಡುದೂರು ಗ್ರಾಮಗಳು. ಎಫ್-05 ಚಾನಾಳ್ ಐಪಿ ಮಾರ್ಗದ ಚಾನಾಳ್ ಗ್ರಾಮ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ