ಗುರುವಾರ, ಫೆಬ್ರವರಿ 22, 2024

ಯುವಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಫೆ.22(ಕರ್ನಾಟಕ ವಾರ್ತೆ): ತಾಲ್ಲೂಕಿನ ಪಿ.ಡಿ ಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಹೊನ್ನೂರ ವಲಿ ಎನ್ನುವ 24 ವಷರ್Àದ ಯುವಕ ಜ.20ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪಿ.ಡಿ ಹಳ್ಳಿ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ. ಕಾಣೆಯಾದ ಯುವಕನ ಚಹರೆ: ಎತ್ತರ 5 ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಉದ್ದನೆಯ ಮುಖ ಹೊಂದಿರುತ್ತಾನೆ. ಯುವಕ ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಕಲರ್ ಟೀ ಶಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆಯುಳ್ಳ ಯುವಕ ಕಾಣಿಸಿದ್ದಲ್ಲಿ ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ:08392258100, ಅಥವಾ 102, ಬಳ್ಳಾರಿ ಎಸ್.ಪಿ ದೂ:0839228400, ಸಿರುಗುಪ್ಪ ಡಿ.ಎಸ್.ಪಿ ದೂ:08392276000, ಪಿ.ಡಿ ಹಳ್ಳಿ ವೃತ್ತದ ಸಿ.ಪಿ.ಐ ದೂ:08392276461, ಪಿ.ಡಿ ಹಳ್ಳಿ ಪೆÇಲೀಸ್ ಠಾಣೆಯ ದೂ:08392265010, ಅಥವಾ ಪಿ.ಎಸ್.ಐ ಮೊ:9480803052 ಗೆ ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ