ಗುರುವಾರ, ಫೆಬ್ರವರಿ 22, 2024

ಫೆ.23 ರಂದು ಪಿಸಿ, ಪಿಎನ್‍ಡಿಟಿ ಕಾಯ್ದೆ ಪರಿಣಾಮ ಅನುಷ್ಠಾನ ಸಭೆ

ಬಳ್ಳಾರಿ,ಫೆ.22(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆ 1994ರ ಕುರಿತಂತೆ ಸಮೀಕ್ಷಿಸಲು ಜಿಲ್ಲಾಧಿಕಾರಿಗಳು ಹಾಗೂ ಪಿಸಿ, ಪಿಎನ್‍ಡಿಟಿ ಕಾಯ್ದೆಯ ಸಮಕ್ಷ ಪ್ರಾಧಿಕಾರಿಗಳೂ ಆದ ಪ್ರಶಾಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಫೆ.23 ರಂದು ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಸಿ, ಪಿಎನ್‍ಡಿಟಿ ಕಾಯ್ದೆ ಪರಿಣಾಮ ಅನುಷ್ಠಾನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ