ಸೋಮವಾರ, ಫೆಬ್ರವರಿ 26, 2024

ಫೆ.28 ರಂದು ಕೃಷಿ-ಡ್ರೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ

ಬಳ್ಳಾರಿ,ಫೆ.26(ಕರ್ನಾಟಕ ವಾರ್ತೆ): ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಸ್ಥೆ, ಸಂಶೋಧನಾ ಕೇಂದ್ರ, ಬಳ್ಳಾರಿ ಇವರ ವತಿಯಿಂದ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಫೆ.28 ರಂದು ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಅಗ್ರಿ-ಡ್ರೋನ್ ಯೋಜನೆಯಡಿಯಲ್ಲಿ, ICAR-ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ (ATARI), ಲುಧಿಯಾನ ಇವರ ಧನಸಹಾಯದೊಂದಿಗೆ ಆಯೋಜಿಸಲಾಗಿದೆ. ಮಾಹಿತಿಗಾಗಿ ಸಮನ್ವಯ ತಂಡ: ಡಾ.ಎಂ.ಎನ್. ರಮೇಶ, ಹಿರಿಯ ವಿಜ್ಞಾನಿ (ಅರಣ್ಯ), ಮೊ: 9630437467. ಗೌರವ್ ಭಾಟಿ, ತಂತ್ರಜ್ಞ, ಮೊ: 91489 51990. ವೃಷಭೇಂದ್ರಪ್ಪ, ತಂತ್ರಜ್ಞ ಇವರ ಮೊ:7899153251, ರಾಜ್ಪಾಲ್, ತಂತ್ರಜ್ಞ ಇವರ ಮೊ:80532 59090. ಸಂಪರ್ಕದ ವಿವರ: ಡಾ.ಬಿ.ಕೃಷ್ಣರಾವ್, ಮುಖ್ಯಸ್ಥರು, ಇವರ ಮೊ:9574715074. ಡಾ.ಎಂ.ಎನ್.ರಮೇಶ, ಹಿರಿಯ ವಿಜ್ಞಾನಿ (ಅರಣ್ಯ), ಇವರ ಮೊ:9630437467 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿಯ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಸ್ಥೆ, ಸಂಶೋಧನಾ ಕೇಂದ್ರದ ಪ್ರಭಾರಿ ಮುಖ್ಯಸ್ಥರಾದ ಬಿ.ಎಸ್.ನಾಯ್ಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ