ಶನಿವಾರ, ಮೇ 4, 2024

ಲೋಕಸಭೆ ಚುನಾವಣೆ: ಮೇ 6 ಮತ್ತು 7 ರಂದು ವಿವಿಧೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ

ಬಳ್ಳಾರಿ,ಮೇ 04(ಕರ್ನಾಟಕ ವಾರ್ತೆ): ಮೇ 07 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಚುನಾವಣಾ ಕಾರ್ಯಕ್ಕೆ ಬಳ್ಳಾರಿ ವಿಭಾಗದಿಂದ ಒಟ್ಟು 190 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದ್ದು, ಮೇ 06(ಸೋಮವಾರ) ಮತ್ತು ಮೇ 07 (ಮಂಗಳವಾರ) ರಂದು ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡುತಿನಿ, ಕಂಪ್ಲಿ ಮತ್ತು ಸಂಡೂರು ಭಾಗದಿಂದ ವಿವಿಧೆಡೆ ತೆರಳುವ ದೈನಂದಿನ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ವಿಭಾಗದ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ