ಬುಧವಾರ, ಜನವರಿ 1, 2025
ಜ.20 ರಂದು ಅಕ್ಕಿ ಬಹಿರಂಗ ಹರಾಜು ಪ್ರಕ್ರಿಯೆ
ಬಳ್ಳಾರಿ,ಜ.01(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಅಕ್ರಮ ದಾಸ್ತಾನು ಹಾಗೂ ಅಕ್ರಮ ಪಡಿತರ ಧಾನ್ಯ ಸಾಗಾಣಿಕೆ, ದಾಸ್ತಾನು ಮಾಡಿರುವ ಕುರಿತು ದಾಖಲುಗೊಂಡ ವಿವಿಧ ಪ್ರಕರಣಗಳಲ್ಲಿ ಜಪ್ತು ಪಡಿಸಿಕೊಂಡ 701.95 ಕ್ವಿಂಟಾಲ್ ಅಕ್ಕಿಯನ್ನು ಜಿಲ್ಲಾಧಿಕಾರಿಯವರ ಆದೇಶದಂತೆ ಜ.20 ರಂದು ಬೆಳಿಗ್ಗೆ 11 ಗಂಟೆಗೆ ಸಿರುಗುಪ್ಪ ಪಟ್ಟಣದ ಎಪಿಎಂಸಿ ಆವರಣದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಸಗಟು ಗೋದಾಮು ಇಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಸಿರುಗುಪ್ಪ ತಹಶೀಲ್ದಾರರು ತಿಳಿಸಿದ್ದಾರೆ.
ಆಸಕ್ತಿಯುಳ್ಳ ಬಿಡ್ಡುದಾರರು ವಿವಿಧ ಷರತ್ತಿಗೊಳಪಟ್ಟು ಭದ್ರತಾ ಠೇವಣಿ ನೀಡಿ ನೋಂದಾಯಿಸಿಕೊAಡವರಿಗೆ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಆಸಕ್ತ ಬಿಡ್ಡುದಾರರು ರೂ.1,50,000/- ಮುಂಗಡ ಭದ್ರತಾ ಠೇವಣಿ ಮೊತ್ತವನ್ನು ಮಾನ್ಯ ತಹಶೀಲ್ದಾರರು, ಸಿರುಗುಪ್ಪ ಇವರ ಹೆಸರಲ್ಲಿ ಡಿಡಿಯನ್ನು ಜ.20 ರಂದು ಸಂಜೆ 05.30 ರೊಳಗೆ ನೋಂದಾಯಿಸಿ, ಸಿರುಗುಪ್ಪದ ಆಹಾರ ನಿರೀಕ್ಷಕರಾದ ಮಹಾರುದ್ರ ಗೌಡ(ಮೊ.9986415163) ಮತ್ತು ವಿಜಯ್ ಕುಮಾರ್(ಮೊ.9449738127) ಇವರಿಂದ ಸ್ವೀಕೃತಿ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ