ಬುಧವಾರ, ಜನವರಿ 29, 2025
ಕೆಕೆಆರ್‌ಡಿಬಿ ಮಂಡಳಿಯಿAದ ಇತಿಹಾಸ ಕುರಿತು ಪುಸ್ತಕ ಪ್ರಕಟಣೆ ಆಸಕ್ತ ಬರಹಗಾರರಿಂದ ಸಾರಲೇಖನ ಆಹ್ವಾನ
ಬಳ್ಳಾರಿ,ಜ.29(ಕರ್ನಾಟಕ ವಾರ್ತೆ):
ಯು ಕಲ್ಯಾಣ ಕರ್ನಾಟಕದ ಭಾಷೆ, ಸಾಹಿತ್ಯ, ಸಾಮರಸ್ಯ ಸಂಸ್ಕೃತಿ, ಶೋಷಿತರ-ಮಹಿಳೆಯರ ಸ್ಥಿತಿಗತಿ, ಸ್ವಾತಂತ್ರ‍್ಯ ಚಳುವಳಿ, ಸಾಮಾಜಿಕ ಚಳುವಳಿಗಳು, 371ನೇ ಕಲಂ ಹೋರಾಟ ಮತ್ತು ಅನುಷ್ಠಾನ, ಸಾಧಕ-ಬಾಧಕಗಳು, ಭವಿಷ್ಯದಲ್ಲಿ ಅಭಿವೃದ್ಧಿಪರ ಹಮ್ಮಿಕೊಳ್ಳಬೇಕಾದ ಯೋಜನೆಗಳ ಸೇರಿದಂತೆ ಒಟ್ಟಾರೆ ಇತಿಹಾಸದ ಕುರಿತು ಆಯಾ ಕ್ಷೇತ್ರಗಳಲ್ಲಿ ಅಂತಾರಾಷ್ಟಿçÃಯ ಮಟ್ಟದ ವಿದ್ವತ್ಪೂರ್ಣ ಸಂಶೋಧನಾ ಪುಸ್ತಕಗಳನ್ನು ಹೊರತರಲು ಯೋಚಿಸಿದ್ದು, ಇದಕ್ಕಾಗಿ ಆಸಕ್ತ ಬರಹಗಾರರಿಂದ ಸಾರಲೇಖನ ಆಹ್ವಾನಿಸಿದೆ.
ಪ್ರಾಚೀನ, ಮಧ್ಯಕಾಲಿನ, ಆಧುನಿಕ ರಾಜ್ಯಾಡಳಿತ ಸೇರಿದಂತೆ, ಸಂಸ್ಥಾನಿಕರ ಕಾಲಘಟ್ಟದ ಇತಿಹಾಸ, ರಾಜ್ಯಶಾಹಿ ವ್ಯವಸ್ಥೆಯಿಂದ ಪ್ರಜಾಶಾಹಿ ಭಾರತದಲ್ಲಿ ವಿಲೀನಘಟ್ಟ, ಏಕೀಕರಣ ಚಳುವಳಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಘಟ್ಟಗಳು, ಸಾಮಾಜಿಕ ಚಳುವಳಿಗಳು, ಸತ್ಯಶೋಧನಾ ಸಮಿತಿ ವರದಿ, ಫಜಲ್ ಅಲಿ ಆಯೋಗದ ವರದಿ, ಧರ್ಮಸಿಂಗ್ ಸಮಿತಿ ವರದಿ, ಬಚಾವತ್ ಆಯೋಗದ ವರದಿ, ನಂಜುAಡಪ್ಪ ಆಯೋಗದ ವರದಿಗ ಅಧ್ಯಯನ, ಮಾನವ ಅಭಿವೃದ್ಧಿ, ಮಾಧ್ಯಮ, ಪ್ರಾದೇಶಿಕ ಅಸಮತೋಲನೆ, ಈ ಭಾಗದ ಉಡುಗೆ ತೊಡುಗೆ, ಆಹಾರ, ಪರಿಸರ, ಖನಿಜಸಂಪತ್ತು, ಅಲೆಮಾರಿ, ಕಲೆ, ಅರಣ್ಯ, ವಿಜ್ಞಾನ, ತಂತ್ರಜ್ಞಾನ, ನೀರಾವರಿ, ಕೈಗಾರಿಕೆ, ವಾಣಿಜ್ಯ, ಸಾರಿಗೆ, ರಸ್ತೆ ಸಂಪರ್ಕ, ಕ್ರೀಡೆ ಕ್ಷೇತ್ರಗಳ ಕುರಿತು ರಾಷ್ಟç-ಅಂತರಾಷ್ಟಿçÃಯ ಮಟ್ಟದಲ್ಲಿ ಸಂಶೋಧನೆ ಮಾಡಿರುವ ವಿದ್ವಾಂಸರಿAದ ಒಂದು ನೂರು ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಸಿ ಪ್ರಕಟಿಸಲಾಗುತ್ತಿದೆ.
ಈ ಯೋಜನೆಯಲ್ಲಿ ಸಂಶೋಧನಾತ್ಮಕ ಪುಸ್ತಕ ಬರೆಯುವ ಆಸಕ್ತಿ ಇರುವವರು ತಾವು ಪುಸ್ತಕ ಬರೆಯಬಹುದಾದ ಕ್ಷೇತ್ರ, ವಿಷಯ, ಶೀರ್ಷಿಕೆಗಳನ್ನು ಸ್ಪಷ್ಟವಾಗಿ ಬರೆದು ಐದು ಪುಟಗಳಿಗೆ ಮೀರದಂತೆ ಸಾರಲೇಖಗಳನ್ನು ಫೆಬ್ರವರಿ 20 ರೊಳಗೆ ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, 'ಅಭಿವೃದ್ಧಿ ಭವನ' ಐವಾನ-ಏ-ಶಾಹಿ, ಕಲಬುರಗಿ-585102 ವಿಳಾಸಕ್ಕೆ ಅಂಚೆ ಮೂಲಕ / ಖುದ್ದಾಗಿ ಅಥವಾ ಇಮೇಲ್ ವಿಳಾಸ kketihasa@gmail.com ಮೂಲಕವೂ ಸಲ್ಲಿಸಬಹುದು.
ಸಾರಲೇಖವು ಆಯ್ದ ಕ್ಷೇತ್ರಗಳಲ್ಲಿ, ಆಯ್ದ ವಿಷಯಕ್ಕೆ ಸಂಬAಧಿಸಿದ ಇದುವರೆಗಿನ ಅಧ್ಯಯನಗಳು, ಸಿದ್ದಾಂತಗಳ ಅನ್ವಯ, ಅಧ್ಯಯನ ಕ್ಷೇತ್ರದ ಸಧ್ಯದ ಪರಿಸ್ಥಿತಿ, ಪ್ರಸ್ತುತ ಅಧ್ಯಯನಕ್ಕೆ ಬಳಸಿಕೊಳ್ಳುವ ಸಿದ್ದಾಂತ ಮತ್ತು ವಿಧಾನಗಳು, ಅವುಗಳ ಸಮರ್ಪಕತೆ, ಆಯ್ದುಕೊಂಡ ವಿಷಯದ ಅಧ್ಯಯನದ ಫಲಿತಗಳು, ಸಾಮಾಜಿಕ ಉಪಯೋಗಗಳು ಇವುಗಳನ್ನು ಒಳಗೊಂಡಿರಬೇಕು. ಸೂಚಕ ಪದಗಳು ಮತ್ತು ಅವಶ್ಯ ಸಂದರ್ಭಗ್ರAಥಗಳು ಕಡ್ಡಾಯವಾಗಿ ಇರಬೇಕು.
ಸಲ್ಲಿಕೆಯಾದ ಸಾರಾಲೇಖಗಳನ್ನು ಪರಿಶೀಲನಾ ಸಮಿತಿ ಆಯ್ಕೆ ಮಾಡಲಿದ್ದು, ಸಮಿತಿಯ ನಿರ್ಣಯವೆ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9844615020 ಗೆ ಸಂಪರ್ಕಿಸಬಹುದು ಎಂದು ಕೆಕೆಆರ್‌ಡಿಬಿ ಮಂಡಳಿಯ ಉಪ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ