ಶುಕ್ರವಾರ, ಜನವರಿ 31, 2025
ತಾಯಿ ಕಾರ್ಡ್ ನೀಡಿ, ಪ್ರತಿದಿನ ಕಬ್ಬಿಣಾಂಶ ಮಾತ್ರೆ ಸೇವನೆ ಖಚಿತಪಡಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು
ಬಳ್ಳಾರಿ,ಜ.31(ಕರ್ನಾಟಕ ವಾರ್ತೆ):
ಗರ್ಭಿಣಿ ಮಹಿಳೆ ಎಂದು ತಿಳಿದ ಕೂಡಲೇ ಉಚಿತವಾಗಿ ತಾಯಿಕಾರ್ಡ್ ಒದಗಿಸಬೇಕು. ಪ್ರತಿದಿನ ಒಂದರAತೆ ಆರು ತಿಂಗಳು ಅವಧಿಯಲ್ಲಿ ಕನಿಷ್ಠ 180 ಕಬ್ಬಿಣಾಂಶ ಮಾತ್ರೆಗಳನ್ನು ನುಂಗುತ್ತಿರುವ ಬಗ್ಗೆ ಮನೆ ಭೇಟಿ ಮೂಲಕ ನಿರಂತರ ನಿಗಾವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು.
ಶುಕ್ರವಾರದಂದು ಜಿಲ್ಲಾ ಪಂಚಾಯತ್ ನ ವಿಡಿಯೋ ಸಂವಾದ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈದ್ಯರು ಆರೋಗ್ಯ ತಪಾಸಣೆ ಮಾಡಿದಾಗ ರಕ್ತದಲ್ಲಿ ಕಬ್ಬಿಣಾಂಶ ಪ್ರಮಾಣ ಕುರಿತು ಗರ್ಭಿಣಿ ಮಹಿಳೆಯರಿಗೆ ಮಾಹಿತಿ ನೀಡಬೇಕು. ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ನುಂಗುವುದರಿAದ ಮಗುವಿನ ಬೆಳವಣಿಗೆ ಸರಿಯಾಗಿ ಆಗುವ, ಹೆರಿಗೆ ವೇಳೆ ರಕ್ತ ಕೊರತೆಯಾಗದಿರುವ ಕುರಿತು ತಿಳಿಸಬೇಕು ಎಂದರು.
ಗರ್ಭಿಣಿಯರಿಗೆ ಪ್ರತಿದಿನ ಮನೆಗೆ ತೆರಳಿ ಪೌಷ್ಟಿಕ ಆಹಾರ ಒದಗಿಸಲು ಕಾರ್ಯಯೋಜನೆ ಹಾಕಿಕೊಂಡು ಗಂಡಾAತರ ಗರ್ಭಿಣಿಯರ ಸಂಖ್ಯೆ ಕಡಿಮೆಯಾಗುವಂತೆ ವೈದ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
*ಸನ್ಮಾನ:*
ಗರ್ಭಿಣಿಯರ ಆರೈಕೆಯನ್ನು ಸಿಬ್ಬಂದಿಯವರ ಮೂಲಕ ಉತ್ತೇಜಿಸಲು ಪ್ರತಿ ತಿಂಗಳು ಒಬ್ಬ ಪ್ರಾಥಮಿಕ ಸುರಕ್ಷಾಧಿಕಾರಿ, ಆಶಾ ಕಾರ್ಯಕರ್ತೆಯರನ್ನು ಗುರ್ತಿಸಿ ಸನ್ಮಾನಿಸಲು ನಿರ್ಧರಿಸಿ, ಪ್ರಸ್ತುತ ತಿಂಗಳು ಟಿ.ಅರುಣಜ್ಯೋತಿ ಹಾಗೂ ಎ.ಚೌಡಮ್ಮ ಅವರಿಗೆ ಸನ್ಮಾನಿಸಲಾಯಿತು.
*ಹಾವು ಕಡಿತಕ್ಕೆ ಚಿಕಿತ್ಸೆ:*
ಹಾವು ಕಡಿತದ ಸಂದರ್ಭದಲ್ಲಿ ಕಡಿತಕ್ಕೊಳಗಾದವರಿಗೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮಾರ್ಗಸೂಚಿ ಅನ್ವಯ 10 ವಾಯಿಲ್ ಆಂಟಿವೆನಮ್ ಲಸಿಕೆ ತಪ್ಪದೇ ನೀಡಬೇಕು.
*ಅಂಧತ್ವಮುಕ್ತ ಬಳ್ಳಾರಿ:*
ಗ್ರಾಮೀಣ ಭಾಗದಲ್ಲಿ ಅಂಧತ್ವ ಗುರ್ತಿಸಿದ ಜನತೆಯನ್ನು ತಪ್ಪದೆ ಶಸ್ತçಚಿಕಿತ್ಸೆಗೆ ಒಳಪಡಿಸಬೇಕು. ಪ್ರಸ್ತುತ ವರ್ಷ 9884 ಜನರಿಗೆ ಶಸ್ತçಚಿಕಿತ್ಸೆ ಮಾಡಲಾಗಿದ್ದು, ಖಾಸಗಿ ಅಸ್ಪತ್ರೆಗಿಂತ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಲು ಸೂಚಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ದೃಷ್ಟಿದೋಷ ಪರಿಣಾಮಕಾರಿ ಗುರ್ತಿಸಬೇಕು. ಬಳಿಕ ಕನ್ನಡಕ ವಿತರಿಸಬೇಕು.
*ಅಂಗಾAಗ ದಾನ ನೋಂದಣಿ:*
ಜಿಲ್ಲೆಯಲ್ಲಿ ಈಗಾಗಲೇ 7092 ಅಂಗಾAಗ ದಾನ ನೋಂದಣಿ ಮಾಡಿಸಿ ರಾಷ್ಟç ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಇನ್ನೂ ನೋಂದಣಿ ಸಹ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವಂತೆ ಜಿಪಂ ಸಿಇಒ ಅವರು ಸೂಚಿಸಿದರು. ಅಲ್ಲದೆ ಡೆಂಗ್ಯು ಮತ್ತು ಚಿಕುನ್‌ಗುನ್ಯಾ, ಕುಟುಂಬ ಕಲ್ಯಾಣ ವಿಧಾನಗಳು, ಕ್ಷಯರೋಗ ಕಾರ್ಯಕ್ರಮ, ತಾಯಿ ಮಗುವಿನ ಆರೈಕೆ, ಮಾನಸಿಕ ಆರೋಗ್ಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಸವರಾಜ್ ದಮ್ಮುರು, ಡಾ.ಅರುಣ್ ಕುಮಾರ್, ಡಾ.ಭರತ್, ಡಾ.ಮಂಜುನಾಥ ಜವಳಿ, ಡಾ.ಸುರೇಶ ಕುಮಾರ್, ಡಾ.ಪ್ರಿಯಾಂಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಿಎನ್‌ಓ ಗಿರೀಶ್, ಡಿಪಿಎಮ್ ವೆಂಕೋಬ್ ನಾಯ್ಕ್, ಮನೋಹರ, ಆಶಾಪ್ರೇಮ ಸೇರಿದಂತೆ ಇತರರು ಇದ್ದರು.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ