ಗುರುವಾರ, ಜನವರಿ 23, 2025

ಎರಡು ವಾರಕ್ಕಿಂತ ಹೆಚ್ಚು ಕಡಿಮೆಯಾಗದ ಕೆಮ್ಮು ಕ್ಷಯವಾಗಿರಬಹುದು;ಒಮ್ಮೆ ಪರೀಕ್ಷಿಸಿ: ಡಾ.ಆಸ್ಮಾ ವರದಾ

ಬಳ್ಳಾರಿ,ಜ.23(ಕರ್ನಾಟಕ ವಾರ್ತೆ): ಕ್ಷಯರೋಗ ಎಂಬುದು ಇಂದಿಗೂ ಸಮುದಾಯದಲ್ಲಿರುವ ಖಾಯಿಲೆಯಾಗಿದ್ದು, ಎರಡು ವಾರಗಳಿಗಿಂತಲೂ ಹೆಚ್ಚು ದಿನ ಕಡಿಮೆಯಾಗದ ಕೆಮ್ಮು ಇದ್ದಲ್ಲಿ ಬಹುಶಃ ಕ್ಷಯವಿರಬಹುದು. ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ರಾಜ್ಯ ಕ್ಷಯರೋಗ ಸಲಹೆಗಾರರಾದ ಡಾ.ಆಸ್ಮಾ ವರದಾ ಅವರು ಸಾರ್ವಜನಿಕರಿಗೆ ತಿಳಿಸಿದರು. ಬುಧವಾರದಂದು, ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯ 100 ದಿನಗಳ ಅಭಿಯಾನದಡಿ ನಗರದ ಕೌಲ್ ಬಜಾರ್ ವ್ಯಾಪ್ತಿಯ ಬ್ರೂಸ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಒದಗಿಸಿರುವ ಆಧುನಿಕ ಸ್ಥಳದಲ್ಲಿಯೇ ರೋಗದ ಪತ್ತೆ ಹಚ್ಚುವಿಕೆಯ ಹ್ಯಾಂಡ್‌ಹೋಲ್ಡ್ ಎಕ್ಸ-ರೇ ಮೆಷಿನ್ ಮೂಲಕ ರೋಗ ನಿರ್ಧರಿಸುವ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳಿಂದ ಸಮುದಾಯದಲ್ಲಿ ಬೇರುರಿರುವ ಕ್ಷಯರೋಗ (ಟಿಬಿ) ಯನ್ನು ಕೊನೆಗಾಣಿಸಲು ಉಚಿತ ಚಿಕಿತ್ಸೆ ನೀಡುವ ಜೊತೆಗೆ ಮೂಲಕ ರೋಗಿಗಳಿಗೆ ಆತ್ಮಸ್ಥೆöÊರ್ಯ ತುಂಬಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಡಿ ವಯೋವೃದ್ಧರು, ಕಾರ್ಮಿಕರು, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುವವರು ಮಾನಸಿಕ ಅಸ್ವಸ್ಥತೆಯುಳ್ಳವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ ಕಫ ಪರೀಕ್ಷೆ, ಟ್ರೂö್ಯನಾಟ್, ಸಿಬಿನಾಟ್ ಮೂಲಕ ಹಾಗೂ ಹ್ಯಾಂಡ್‌ಹೋಲ್ಡ್ ಎಕ್ಸ್ -ರೇ ಯಂತ್ರದಿAದ ನಿರಂತರ ಪರೀಕ್ಷೆ ಮಾಡಲಾಗುತ್ತಿದ್ದು, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕುಟುಂಬದ ಸದಸ್ಯರು ಹಾಗೂ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಕಾರಣವಿಲ್ಲದೆ ಹಸಿವಾಗದಿರುವುದು, ತೂಕ ಇಳಿಕೆಯಾಗುತ್ತಿದ್ದಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಡಾ.ಸುರೇಖಾ, ಕ್ಷಯರೋಗ ವಿಭಾಗದ ಕ್ಷಕಿರಣ ಅಧಿಕಾರಿ ಶೇಷಾವಲಿ, ಎಸ್‌ಟಿಎಸ್ ಓಬಳರೆಡ್ಡಿ, ಟಿಬಿಹೆಚ್‌ವಿ ಪ್ರದೀಪ್, ಔಷಧಾಧಿಕಾರಿ ಶ್ರೀನಾಥ್ ಪಾಟೀಲ್, ಪಿಹೆಚ್‌ಸಿಓ ತುಳಸಿ ಹೆಗಡೆ, ಶೂಶ್ರೂಷಣಾಧಿಕಾರಿ ಆಶಾ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಉಸ್ಥಿತರಿದ್ದರು. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ