ಬುಧವಾರ, ಜನವರಿ 29, 2025

‘ಬAಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಲಾ ಮಳಾವೋ’- ಕಲಾವಿದರಿಂದ ಅರ್ಜಿ ಆಹ್ವಾನ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಬಂಜಾರರ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ‘ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಲಾ ಮಳಾವೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಬಂಜಾರ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಬಂಜಾರ ಸಮುದಾಯದ ಬಹುಮುಖಿ ಕಲಾ ಪ್ರಕಾರಗಳಾದ ವಾಜಾ ವಾದ್ಯ ಕಲೆ, ಕಥನ ಗಾಯನ(ಸಣ್ಣ ವಾಜಾ), ಲೆಂಗಿ ನೃತ್ಯ, ನಂಗಾರಾ ಠೋಳಿ ಬಿಡಿಸುವ ನೃತ್ಯ, ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಘೂಮರ್ ನೃತ್ಯ, ಮಹಿಳೆಯ ಜಾನಪದ ನೃತ್ಯ, ಮಹಿಳೆಯರ ಸಾಂಪ್ರದಾಯಿಕ ಗಾಯನ ಮತ್ತು ನೃತ್ಯ, ಬಂಜಾರ ಸುಗಮ ಸಂಗೀತ, ಬಾಲಕಿಯರ ನೃತ್ಯ, ಬಾಲಕರ ನೆಂಗಿ ನೃತ್ಯ, ಬಾಲಕರ ಮತ್ತು ಬಾಲಕಿಯರ ಆಧುನಿಕ ನೃತ್ಯ ಮತ್ತು ಮಹಿಳೆಯರ ಹವೆಲಿ, ಡಾವಲೋ ಪ್ರಕಾರಗಳಲ್ಲಿ ಭಾಗವಹಿಸಬಹುದು. ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಕೊಪ್ಪಳ ವಲಯ ಕಚೇರಿ ವಿಳಾಸಕ್ಕೆ ಕಳುಹಿಸಬೇಕು. ಈ ಹಿಂದೆ ನಿಗಮದಿಂದ ನಡೆದ ಎಲ್ಲಾ ಕಲಾ ಮಳವೋ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪಡೆದ ಕಲಾ ತಂಡಗಳ ಕಲಾವಿದರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.08539-220842 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ವಲಯ ಕಚೇರಿಯ ವಲಯ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ