ಮಂಗಳವಾರ, ಜನವರಿ 21, 2025
ಸಿರುಗುಪ್ಪ: ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ವಕ್ಫ್ ಸಂಸ್ಥೆಯ ದಾಖಲಾತಿ ನೋಂದಣಿ ಅವಧಿ ವಿಸ್ತರಣೆ
ಬಳ್ಳಾರಿ,ಜ.21(ಕರ್ನಾಟಕ ವಾರ್ತೆ):
ಸಿರುಗುಪ್ಪ ಪಟ್ಟಣದ ವಕ್ಫ್ ಸಂಸ್ಥೆಯಾದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಸಮಿತಿ ಸಾಮಾನ್ಯ ಸದಸ್ಯರ ದಾಖಲಾತಿ ನೋಂದಣಿ ಅವಧಿಯನ್ನು ಜ.22 ರ ವರೆಗೆ ವಿಸ್ತರಿಸಲಾಗಿದೆ.
ಜನವರಿ 21 ರಿಂದ ಜನವರಿ 22 ರವರೆಗೆ ಬೆಳಿಗ್ಗೆ 10:30 ಗಂಟೆಯಿAದ ಮಧ್ಯಾಹ್ನ 3:30 ಗಂಟೆಯ ಅವಧಿಯಲ್ಲಿ ಹೊಸ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆ ವಿತರಣೆ ಹಾಗೂ ಸ್ವೀಕೃತ ಮಾಡಲಾಗುತ್ತದೆ.
ಜನವರಿ 22 ರೊಳಗೆ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ರ ಕಚೇರಿಯಲ್ಲಿ 3:30 ಗಂಟೆ ಒಳಗೆ ಸಲ್ಲಿಸಬಹುದಾಗಿದೆ. ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಜನವರಿ 26 ರಂದು ಪ್ರಕಟಿಸಲಾಗುತ್ತದೆ.
ಕರಡು ಪಟ್ಟಿಗೆ ಸಂಬAಧಿಸಿದAತೆ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಜನವರಿ 27 ರಿಂದ ಜನವರಿ 28 ರವರೆಗೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ಗಂಟೆ ರೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳ ವಿಚಾರಣೆ ಜನವರಿ 29 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ಗಂಟೆ ರೊಳಗೆ ನಡೆಸಲಾಗುತ್ತದೆ.
ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಜನವರಿ 31 ರಂದು ಮಧ್ಯಹ್ನ 3.00ಕ್ಕೆ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ರ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಎಂದು ಸಿರುಗುಪ್ಪದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ನೋಂದಣಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ