ಮಂಗಳವಾರ, ಜನವರಿ 28, 2025

ಬಳ್ಳಾರಿ ಮಹಾನಗರ ಪಾಲಿಕೆ: ಸ್ವ-ಸಹಾಯ ಸಂಘಗಳಿAದ ಅರ್ಜಿ ಆಹ್ವಾನ

ಬಳ್ಳಾರಿ,ಜ.28(ಕರ್ನಾಟಕ ವಾರ್ತೆ): ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಅಭಿಯಾನದ ಅಮೃತ್ ಮಿತ್ರ ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆಯಡಿ ಕಾರ್ಯಕ್ರಮದಡಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಮತ್ತು ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮೊತ್ತವನ್ನು ಸ್ವಸಹಾಯ ಸಂಘಗಳಿAದ ಸಮರ್ಪಕವಾಗಿ ವಸೂಲಾತಿ ಮಾಡಲು ಅರ್ಹ ಸ್ವಸಹಾಯ ಸಂಘಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಸ್ವಸಹಾಯ ಸಂಘದ ಸದಸ್ಯರು ನಿಗಧಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಫೆ.05 ರೊಳಗಾಗಿ ಅರ್ಜಿಯನ್ನು ಮಹನಾಗರ ಪಾಲಿಕೆ ಕಚೇರಿಯ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಅರ್ಹತೆ: ಸ್ವಸಹಾಯ ಸಂಘವು ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿರಬೇಕು (ಎಂಐಎಸ್ ಕೋಡ್ ಹೊಂದಿರಬೇಕು) ಹಾಗೂ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು. ಆಸಕ್ತ ಸ್ವಸಹಾಯ ಸಂಘದ ಸದಸ್ಯರು ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣ ಹಾಗೂ ಎಲೆಕ್ಟಾçನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೊಂದಿರಬೇಕು. ಸ್ವಸಹಾಯ ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು. ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಬ್ಯಾಂಕಿನ ಮೂಲಕ ಅಥವಾ ಆಂತರಿಕ ಸಾಲ ಪಡೆದು ನಿಯಮಿತವಾಗಿ ಸಾಲ ಮರು ಪಾವತಿ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಮಹಾನಗರ ಪಾಲಿಕೆ ಕಚೇರಿಗೆ ಸಂಪರ್ಕಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ