ಮಂಗಳವಾರ, ಜನವರಿ 28, 2025
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜ.28(ಕರ್ನಾಟಕ ವಾರ್ತೆ):
ನಗರದ ಮೀನಾಕ್ಷಿ ಸರ್ಕಲ್ ಹತ್ತಿರ ಬಿಂದು ಲಾಡ್ಜ್ನಲ್ಲಿ ಸುಮಾರು 45-50 ವರ್ಷದ ನೀಲಕಂಠ ಎಂಬ ಅನಾಮಧೇಯ ವ್ಯಕ್ತಿಯು ಅಸ್ವಸ್ಥರಾಗಿ ಜ.25 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ. ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ.
ಚಹರೆ: ಅಂದಾಜು 5.4 ಅಡಿ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ, ತಲೆಯ ಮೇಲೆ ಬಿಳಿ ಮಿಶ್ರಿತ ಕಪ್ಪು ಕೂದಲು ಹಾಗೂ ಮುಖದಲ್ಲಿ ಸಣ್ಣ ಮೀಸೆ ಗಡ್ಡವನ್ನು ಹೊಂದಿರುತ್ತಾರೆ. ತುಂಬು ತೋಳಿನ ಹಸಿರು ಬಣ್ಣದ ಅಂಗಿ ಧರಿಸುತ್ತಾರೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿಎಸ್‌ಐ ಮೊ.9480803081, ಪಿಐ ಮೊ.9480803045 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ