ಗುರುವಾರ, ಜನವರಿ 23, 2025

ಜ.30 ರಂದು ಅಂಚೆ ಕಚೇರಿ ದೂರುಗಳ ಕುರಿತು ‘ಡಾಕ್ ಅದಾಲತ್’

ಬಳ್ಳಾರಿ,ಜ.23(ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂಚೆ ಕಚೇರಿಗಳಿಗೆ ಸಂಬAಧಿಸಿದAತೆ ಅಂಚೆ ವಿಷಯಗಳ ಬಗ್ಗೆ ಚರ್ಚಿಸಲು ಜ.30 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಡಿಸಿ ಕಾಂಪೌAಡ್‌ನ ಅಕ್ಕನ ಬಳಗ ಎದುರಿನ ಉತ್ತರ ಕರ್ನಾಟಕ ಕ್ಷೇತ್ರದ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ. ಉತ್ತರ ಕರ್ನಾಟಕ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಂದು ಕೊರತೆಗಳಿರುವ ಸಾರ್ವಜನಿಕರು ಜ.28 ಸಂಜೆ 5 ಗಂಟೆಯ ಒಳಗೆ “ಕಾರ್ಯದರ್ಶಿ. ಡಾಕ್ ಅದಾಲತ್, ಪೋಸ್ಟ್ ಮಾಸ್ಟರ್ ಜನರಲ್ ರವೆ ಕಚೇರಿ, ಉತ್ತರ ಕರ್ನಾಟಕ ಕ್ಷೇತ್ರ, ಧಾರವಾಡ-580001’ ಇವರಿಗೆ ದೂರುಗಳನ್ನು ಸಲ್ಲಿಸಬಹುದು ಎಂದು ಪೋಸ್ಟ ಮಾಸ್ಟರ್ ಜನರಲ್ ಕಚೇರಿಯ ಸಹಾಯಕ ನಿರ್ದೇಶಕ ಸುಕುಮಾರ್ ನಾಯ್ಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ