ಗುರುವಾರ, ಜನವರಿ 30, 2025
ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜ.30(ಕರ್ನಾಟಕ ವಾರ್ತೆ)
ಕುಡುತಿನಿ ಪಟ್ಟಣದ ಬಳಿಗೇರೆ ತಿಪ್ಪೆ ಏರಿಯಾ ಹತ್ತಿರದ ನಿವಾಸಿ ಗುಡಿ ಅಮರೇಶಯ್ಯ ಎನ್ನುವ 58 ವರ್ಷದ ವ್ಯಕ್ತಿಯು 2023 ಸೆ.07 ರಂದು ಕಾಣೆಯಾಗಿರುವ ಕುರಿತು ಕುಡತಿನಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ:
ಎತ್ತರ 5.3 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಕುತ್ತಿಗೆ ಹಿಂಭಾಗದಲ್ಲಿ ಕಪ್ಪು ಮಚ್ಚೆ ಇದ್ದು ಹಾಗೂ ತಲೆಯ ಮುಂಭಾಗದಲ್ಲಿ ತಲೆ ಕೂದಲು ಇರುವುದಿಲ್ಲ, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಡುತಿನಿ ಪೋಲಿಸ್ ಠಾಣೆಯ ಪಿಎಸ್‌ಐ ದೂ.9480803078 ಅಥವಾ ಬಳ್ಳಾರಿ ಪೋಲಿಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ